ಆರೋಪಿ ಪರ ಸಾಕ್ಷಿ ಹೇಳಿದ ಸಂತ್ರಸ್ತೆಗೆ ಥಳಿತ

7

ಆರೋಪಿ ಪರ ಸಾಕ್ಷಿ ಹೇಳಿದ ಸಂತ್ರಸ್ತೆಗೆ ಥಳಿತ

Published:
Updated:
ಆರೋಪಿ ಪರ ಸಾಕ್ಷಿ ಹೇಳಿದ ಸಂತ್ರಸ್ತೆಗೆ ಥಳಿತ

ಬಾಗಲಕೋಟೆ: ಅತ್ಯಾಚಾರದ ಆರೋಪದಡಿ ಬಂಧಿತನಾಗಿದ್ದ ಆರೋಪಿಯ ವಿಚಾರಣೆ ವೇಳೆ ಆತನ ಪರ ಸಾಕ್ಷಿ ಹೇಳಿದ ಸಂತ್ರಸ್ತೆಗೆ ಆಕೆಯ ಪೋಷಕರೇ ಥಳಿಸಿದ ಘಟನೆ ಶನಿವಾರ ಇಲ್ಲಿನ ನವನಗರದ ಜಿಲ್ಲಾ ನ್ಯಾಯಾಲಯದ ಎದುರು ನಡೆದಿದೆ. ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ರಬಕವಿ–ಬನಹಟ್ಟಿ ತಾಲ್ಲೂಕು ಚಿಮ್ಮಡದ ಯುವತಿಯ ಹಾಗೂ ಅದೇ ಊರಿನ ಯಂಕಪ್ಪ ಎಂಬ ಯುವಕ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಇತ್ತೀಚೆಗೆ ಪೋಷಕರೊಂದಿಗೆ ಬನಹಟ್ಟಿ ಠಾಣೆಗೆ ಬಂದಿದ್ದ ಯುವತಿ, ಪ್ರಿಯಕರ ಯಂಕಪ್ಪ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದರು.

ಪೊಲೀಸರು ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಯಂಕಪ್ಪನನ್ನು ಬಂಧಿಸಿದ್ದರು. ಆರೋಪಿಯ ವಿರುದ್ಧ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು.

ಪ್ರಕರಣದ ವಿಚಾರಣೆ ಹಿನ್ನೆಲೆ ನ್ಯಾಯಾಲಯಕ್ಕೆ ಬಂದಿದ್ದ ಯುವತಿ ಯಂಕಪ್ಪನ ಪರ ಸಾಕ್ಷಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಆಕೆಯ ಪೋಷಕರು ನ್ಯಾಯಾಲಯದಿಂದ ಹೊರಗೆ ಬರುತ್ತಿದ್ದಂತೆಯೇ ಮಗಳನ್ನು ಹಿಡಿದು ಥಳಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !