ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡೋರಿ ನಾಲ ಬೆಳಕೋಟಾ ಜಲಾಶಯದಿಂದ ನೀರು ಬಿಡುಗಡೆ

Last Updated 14 ಜುಲೈ 2021, 13:13 IST
ಅಕ್ಷರ ಗಾತ್ರ

ಕಮಲಾಪುರ: ತಾಲ್ಲೂಕಿನ ಗಂಡೋರಿ ನಾಲ (ಬೆಳಕೋಟಾ) ಜಲಾಶಯದಿಂದ ಬುಧವಾರ ನೀರು ಹೊರ ಬಿಡಲಾಯಿತು.

ಜಲಾಶಯದ 8 ಗೇಟ್‌ಗಳ ಪೈಕಿ ಮೂರು ಗೇಟ್‌ಗಳನ್ನು 10 ಸೆಂಟಿ ಮೀಟರ್‌ನಷ್ಟು ಎತ್ತರಿಸಿ 580 ಕ್ಯೂಸೆಕ್ಸ್‌ ನೀರು ಹೊರಬಿಡಲಾಯಿತು.

ಜಲಾಶಯದ ಗರಿಷ್ಠ ಮಟ್ಟ 467.00 ಮೀಟರ್‌ ಇದ್ದು ಸದ್ಯ 465.40 ಮೀಟರ್‌ ತಲುಪಿದೆ. 350 ಕ್ಯೂಸೆಕ್ಸ್‌ ಒಳ ಹರಿವಿದೆ. 1.887 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿದ್ದು, ಸದ್ಯ1.578 ಟಿಎಂಸಿ ನೀರು ಸಂಗ್ರಹಗೊಂಡಿದೆ ಎಂದು ಜಲಾಶಯದ ಸಹಾಯಕ ಎಂಜಿನೀಯರ ಶ್ರೀಕಾಂತ ಹೊಂಡಾಳೆ ತಿಳಿಸಿದ್ದಾರೆ.

ತಹಶೀಲ್ದಾರ ಅಂಜುಮ್‌ ತಬಸುಮ್‌ ಬುಧವಾರ ಜಲಾಶಯಕ್ಕೆ ಭೇಟಿ ನೀಡಿದರು. ಇನ್ನೆರಡು ಮೂರು ದಿನ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಜಲಾಶಯ ಭರ್ತಿಯಾಗುವ ಮನ್ನ ನೀರು ಹೊರ ಬಿಡುತ್ತಿರಬೇಕು. ಒಮ್ಮಲೆ ನೀರು ಬಿಟ್ಟರೆ ಕೆಳದಂಡೆಯಲ್ಲಿ ಪ್ರವಾಹ ಉಂಟಾಗುತ್ತದೆ. ಜಮೀನು ಹಾಗೂ ಗ್ರಾಮಗಳಲ್ಲಿ ಪ್ರವಾಹದ ನೀರು ನುಗ್ಗಿ ಹಾನು ಉಂಟಾಗುತ್ತದೆ. ಮೇಲಿನ ಜಲಶಯದ ಅಧಿಕಾರಿಗಳಿಗೆ ಸಂಪರ್ಕಿಸಿ ಆಗಾಗ ಮಾಹಿತಿ ಪಡೆದುಕೊಳ್ಳುತ್ತಿರಬೇಕು ಎಂದು ಜಲಾಶಯದ ಸಹಾಯಕ ಎಂಜಿನೀಯರಗೆ ತಿಳಿಸಿದರು.

ಬೆಣ್ಣೆತೊರೆ ಜಲಾಶಯ: ಬೆಣ್ಣೆತೊರೆ ಜಲಾಶಯದಿಂದ 200 ಕ್ಯೂಸೆಕ್ಸ್‌ ನೀರು ಹೊರಬಿಡಲಾಗಿದೆ. ಜಲಾಶಯದ ಗರಿಷ್ಠ 438.89 ಮೀಟರ್‌ ಆಗಿದ್ದು, 437.36 ಮೀಟರ್‌ ತಲುಪಿದೆ.

135 ಕ್ಯೂಸೆಕ್ಸ್‌ ಒಳ ಹರಿವಿದ್ದು, ಒಟ್ಟು 5.29 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿದ್ದು, ಸದ್ಯ 3.78 ಟಿಎಂಸಿ ನೀರು ಸಂಗ್ರಹಗೊಂಡಿದೆ. ಜಲಾಶಯ ಶೇ 71.36 ಭರ್ತಿಯಾಗಿದೆ ಎಂದು ಸಹಾಯಕ ಎಂಜಿನೀರ ವೀರೇಶ ಮಾಮನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT