ನಗರದಲ್ಲಿ 23 ಕ್ವಿಂಟಾಲ್ ಪಡಿತರ ಅಕ್ಕಿ ವಶ

7

ನಗರದಲ್ಲಿ 23 ಕ್ವಿಂಟಾಲ್ ಪಡಿತರ ಅಕ್ಕಿ ವಶ

Published:
Updated:

ಬಳ್ಳಾರಿ: ನಗರದ ಬಂಡಿಮೋಟ್ ಪ್ರದೇಶದಲ್ಲಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಆಟೋವನ್ನು ಎಪಿಎಂಸಿ ಠಾಣೆ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.

ಆಹಾರ ನಿರೀಕ್ಷಕ ರವಿ ರಾಠೋಡ್ ಹಾಗೂ ಎಪಿಎಂಸಿ ಠಾಣೆ ಪೊಲೀಸರು ದಾಳಿ ನಡೆಸಿ ನಗರ ಮತ್ತು ಗ್ರಾಮಾಂತರ ಪ್ರದೇಶದಿಂದ ಕಡಿಮೆ ದರಕ್ಕೆ ಖರೀದಿಸಿ ಡಿ.ಹೀರೆಹಾಳ್ ಗ್ರಾಮದ ಕಡೆ ಸಾಗಣೆ ಮಾಡುತ್ತಿದ್ದ ₹34,500 ಬೆಲೆ ಬಾಳುವ 23.ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ್ದಾರೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ 16 ಮಂದಿ ಬಂಧನ: ನಗರದ ಪ್ರತಿಷ್ಟಿತ ಖಾಸಗಿ ಹೋಟೆಲ್ ನಲ್ಲಿ ಇಸ್ಪಿಟ್ ಜೂಜಾಟವಾಡುತ್ತಿದ್ದ 16 ಮಂದಿಯನ್ನು ಬಂಧಿಸಿ ₹73,850 ವಶಪಡಿಸಿಕೊಳ್ಳಲಾಗಿದೆ ಎಂದು ಗಾಂಧಿನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !