ಬುಧವಾರ, ಮೇ 18, 2022
24 °C

ಸಾಲಮ್ಮ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೋರಣಗಲ್ಲು: ಸಮೀಪದ ಕುಡುತಿನಿ ಪಟ್ಟಣ ಪಂಚಾಯಿತಿ ನೂತನ ಉಪಾಧ್ಯಕ್ಷೆಯಾಗಿ 19ನೇ ವಾರ್ಡ್ ಬಿಜೆಪಿ ಸದಸ್ಯೆ ಆರ್. ಸಾಲಮ್ಮ ರಾಮಚಂದ್ರಪ್ಪ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಚುನಾವಣೆ ಪ್ರಕ್ರಿಯೆಯಲ್ಲಿ ಪಂಚಾಯಿತಿ 19 ಸದಸ್ಯರ ಪೈಕಿ 12 ಜನ ಸದಸ್ಯರು ಪಾಲ್ಗೊಂಡಿದ್ದರು. ಆರ್. ಸಾಲಮ್ಮ ಹೊರತುಪಡಿಸಿ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಬಳ್ಳಾರಿ ತಾಲ್ಲೂಕು ತಹಶೀಲ್ದಾರ್ ರೆಹಾನ್ ಪಾಷಾ ಅವರು ಈ ಅವಿರೋಧ ಆಯ್ಕೆ ಘೋಷಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ರಾಮಲಿಂಗಪ್ಪ, ದುಗ್ಗೆಪ್ಪ, ಸುನೀಲ್, ಮಂಜುನಾಥ, ಸುಜಾತ, ರತ್ನಮ್ಮ, ಭಾಗ್ಯಶ್ರೀ, ಬಸಮ್ಮ, ಗೀತಾ, ದೇವಮ್ಮ ಮುಖಂಡರಾದ ಚಂದ್ರಾಯಿ ದೊಡ್ಡಬಸಪ್ಪ, ಶ್ರೀನಿವಾಸ್, ಎ. ಪಂಪಾಪತಿ, ವೀರಾರೆಡ್ಡಿ, ಬಸವರಾಜ, ಹೀರೆಮಠಸ್ವಾಮಿ, ರಾಮಚಂದ್ರಪ್ಪ, ಶೇಷಪ್ಪ ಹಾಜರಿದ್ದರು.

ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷರನ್ನು ಪಟ್ಟಣದ ಮುಖಂಡರು, ನಾಗರಿಕರು ಸನ್ಮಾನಿಸಿದರು. ಅಭಿಮಾನಿಗಳು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.