ಸಮರ್ಥ, ಅನರ್ಘ್ಯ ಗೆಲುವು

7
ರಾಜ್ಯ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ ಜೂನಿಯರ್‌ ವಿಭಾಗ

ಸಮರ್ಥ, ಅನರ್ಘ್ಯ ಗೆಲುವು

Published:
Updated:
Deccan Herald

ಹೊಸಪೇಟೆ: ಪ್ರಬಲ ಪೈಪೋಟಿ ಕಂಡುಬಂದರೂ ಚುರುಕಿನ ಹೋರಾಟ ತೋರಿದ ಬೆಂಗಳೂರಿನ ಕೆ. ಸಮರ್ಥ್‌ ಮತ್ತು ಅನರ್ಘ್ಯಾ ಮಂಜುನಾಥ ಅವರು ಇಲ್ಲಿ ನಡೆಯುತ್ತಿರುವ ಎಸ್‌.ಎಲ್‌.ಆರ್‌. ಮೆಟಲಿಕ್ಸ್‌ ಸಂಸ್ಥೆಯ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಜೂನಿಯರ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಸೋಮವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಬ್ಯಾಂಕ್‌ ಆಫ್‌ ಬರೋಡಾ ಪ್ರತಿನಿಧಿಸುವ ಸಮರ್ಥ್‌ 16–14, 7–11, 11–05, 7–11, 11–2, 11–5ರಲ್ಲಿ ಬೆಂಗಳೂರಿನ ಎಂಎಸ್‌ಎಸ್‌ಟಿಟಿ ಅಕಾಡೆಮಿಯ ಕೆ.ಜೆ. ಆಕಾಶ್‌ ವಿರುದ್ಧ ಗೆಲುವು ಪಡೆದರು.

ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಅನರ್ಘ್ಯಾ 7–11, 11–9, 11–6, 9–11, 11–6, 8–11, 11–5ರಲ್ಲಿ ಜಿ. ಕರುಣಾ ಎದುರು ಜಯ ಪಡೆದರು. ಟೂರ್ನಿಯ ಕೊನೆಯ ದಿನವಾದ ಮಂಗಳವಾರ ಯೂತ್‌ ಬಾಲಕರ ಹಾಗೂ ಬಾಲಕಿಯರ ವಿಭಾಗ, ಪುರುಷರ ಮತ್ತು ಮಹಿಳೆಯರ ವಿಭಾಗದ ಫೈನಲ್‌ ಪಂದ್ಯಗಳು ಜರುಗಲಿವೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !