ಶುಕ್ರವಾರ, ಮೇ 14, 2021
25 °C
22 ರಂದು ಸಂಡೂರಿನಲ್ಲಿ ಸಮಾವೇಶ

ಬಳ್ಳಾರಿ: ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕು ಪತ್ರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುದ್ದಿಗೋಷ್ಠಿ

ಬಳ್ಳಾರಿ: 'ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ಏ.22 ರಂದು ಸಂಡೂರಿನ ವಾಲ್ಮೀಕಿ ಮಂದಿರದಲ್ಲಿ ಬೃಹತ್ ಸಮಾವೇಶವನ್ನು‌ ಹಮ್ಮಿಕೊಳ್ಳಲಾಗಿದೆ' ಎಂದು ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ತಿಳಿಸಿದರು.

'ಸಂಡೂರು ತಾಲ್ಲೂಕಿನಲ್ಲಿ ಅರಣ್ಯ ಹಕ್ಕು ಸಮಿತಿಯು ಸಮರ್ಪಕವಾಗಿ‌ ಕಾರ್ಯ ನಿರ್ಚಹಿಸುತ್ತಿಲ್ಲ. ಅರ್ಜಿಗಳ ಪರಿಶೀಲನೆ ಮಾಡಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸುವ ಸಲುವಾಗಿಯೇ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು' ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ಸಮಾವೇಶವನ್ನು ಕರ್ನಾಟಕ ಪ್ರಾಂತ ರೈತ ಸಂಘದ  ರಾಜ್ಯ ಘಟಕದ ಕಾರ್ಯದರ್ಶಿ ಯು.ಬಸವರಾಜ ಉದ್ಘಾಟಿಸಲಿದ್ದಾರೆ.ಸಂಘದ  ಮುಖಂಡರಾದ ವಿ..ಎಸ್.ಶಿವಶಂಕರ್, ಸಿಐಟಿಯು ಮುಖಂಡರಾದ ಗಾಳಿ‌ ಬಸವರಾಜ್,  ಆರ್.ಎಸ್.ಬಸವರಾಜ್ ಭಾಗವಹಿಸಲಿದ್ದಾರೆ' ಎಂದು ಮಾಹಿತಿ ನೀಡಿದರು.

ಮುಖಂಡರಾದ ಎಚ್.ದುರ್ಗಮ್ಮ, ಯು.ತಿಪ್ಪೇಸ್ವಾಮಿ, ಜೆ.ಎಂ‌.ಚೆನ್ನಬಸವಯ್ಯ ಮಾರುತಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು