ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾವಿತ್ರಿಬಾಯಿ ಫುಲೆ ದೇಶದ ಮೊದಲ ಶಿಕ್ಷಕಿ’

Last Updated 3 ಜನವರಿ 2019, 12:29 IST
ಅಕ್ಷರ ಗಾತ್ರ

ಹೊಸಪೇಟೆ: ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಇಲ್ಲಿನ ಎಂ.ಜೆ. ನಗರದ ಎರಡನೇ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಆಚರಿಸಲಾಯಿತು.

ಅಂಗನವಾಡಿ ಮಕ್ಕಳು ಕೇಕ್‌ ಕತ್ತರಿಸಿದರು. ಕೇಂದ್ರದ ಮೇಲ್ವಿಚಾರಕಿ ಅನುಪಮ, ಶಿಕ್ಷಕಿ ಕನಕಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅನುಪಮ, ‘ಸಾವಿತ್ರಿಬಾಯಿ ಈ ದೇಶದ ಮೊಟ್ಟಮೊದಲ ಶಿಕ್ಷಕಿ. ದಮನಿತರಿಗೆ ಅಕ್ಷರ ಜ್ಞಾನ ಕೊಟ್ಟು ಅವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು. ಭಾರತದ ಮೊದಲ ಮಹಿಳಾ ಹೋರಾಟಗಾರ್ತಿ ಕೂಡ ಹೌದು’ ಎಂದು ಹೇಳಿದರು.

‘ಸರ್ಕಾರ ಅಂಗನವಾಡಿಗಳಿಗೆ ಇನ್ನಷ್ಟು ಶಕ್ತಿ ತುಂಬಿ, ಪ್ರಾಥಮಿಕ ಹಂತದ ಕಲಿಕಾ ವ್ಯವಸ್ಥೆಯನ್ನು ಬಲಪಡಿಸಬೇಕು. ಅಡಿಪಾಯ ಗಟ್ಟಿಯಾಗಿದ್ದರೆ ಇಡೀ ಕಟ್ಟಡ ಸದೃಢವಾಗಿರಲು ಸಾಧ್ಯ’ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕ ಎಂ.ಎಂ. ವಿರೂಪಾಕ್ಷಯ್ಯ ಮಾತನಾಡಿ, ‘ಹೆಣ್ಣು ಅಬಲೆಯಲ್ಲ ಸಬಲೆ ಎಂಬುದನ್ನು ಸಾವಿತ್ರಿಬಾಯಿ ಅನೇಕ ವರ್ಷಗಳ ಹಿಂದೆ ಸಾಧಿಸಿ ತೋರಿಸಿದ್ದರು. ಈ ಅಂಗನವಾಡಿ ಕೇಂದ್ರಕ್ಕೆ ಅವರ ಹೆಸರು ನಾಮಕರಣ ಮಾಡಿರುವುದು ಒಳ್ಳೆಯ ಕೆಲಸ’ ಎಂದು ಶ್ಲಾಘಿಸಿದರು.

ನಗರಸಭೆ ಸದಸ್ಯ ಚಂದ್ರಕಾಂತ ಕಾಮತ್‌,ನರಸಿಂಹ ಮೂರ್ತಿ, ವೈ.ಗಣಪತಿ ಕಾಮತ್, ನರೇಶ್ ಗುಪ್ತಾ, ದೇವದಾಸ್, ಲಿಂಗಪ್ಪ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕೊಟ್ರಬಸಮ್ಮ, ಸಹಾಯಕಿ ಅನಿತಾ, ವಿ. ತಿಮ್ಮರಾಜು, ವಿ. ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT