‘ವಚನ ದಿನ’: ‘ಜೀವಪರ ಕಾಳಜಿಯೇ ಶರಣರ ಆಶಯ’

7

‘ವಚನ ದಿನ’: ‘ಜೀವಪರ ಕಾಳಜಿಯೇ ಶರಣರ ಆಶಯ’

Published:
Updated:
Deccan Herald

ಹೊಸಪೇಟೆ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಗುರುವಾರ ಸಂಜೆ ನಗರದಲ್ಲಿ ‘ವಚನ ದಿನ’ ಆಚರಿಸಲಾಯಿತು.

ಸಂಶೋಧಕ ದೊಡ್ಡ ಹನುಮಂತ ಮಾತನಾಡಿ, ‘ಜೀವಪರ ಕಾಳಜಿ ಮತ್ತು ಲಿಂಗ ಸಮಾನತೆಯೇ ವಚನ ಸಾಹಿತ್ಯದ ಆಶಯವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಘನತೆಯಿಂದ ಬದುಕಬೇಕು ಎನ್ನುವುದು ಬಸವಾದಿ ಶರಣರ ಬಯಸಿದ್ದರು. ಅದರಂತೆ 12ನೇ ಶತಮಾನದಲ್ಲಿ ಹೊಸ ಸಮಾಜ ಕಟ್ಟಿದ್ದರು’ ಎಂದು ಹೇಳಿದರು.

‘ನಡೆ–ನುಡಿಯಲ್ಲಿ ಒಂದಾಗಿರಬೇಕು ಎನ್ನುವುದು ಶರಣರ ಸಿದ್ಧಾಂತವಾಗಿತ್ತು. ಎಲ್ಲ ಜೀವರಾಶಿಗಳಲ್ಲಿ ದೇವರನ್ನು ಕಾಣುತ್ತಿದ್ದರು’ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಅಮರೇಶ್ವರ, ಸಾಹಿತಿಗಳಾದ ಮೃತ್ಯುಂಜಯ ರುಮಾಲೆ, ಟಿ.ಎಚ್‌. ಬಸವರಾಜ, ನಂದೀಶ್ವರ ದಂಡೆ, ಬಸವ ಬಳಗದ ಅಧ್ಯಕ್ಷ ಬಸವ ಕಿರಣ ಸ್ವಾಮಿ, ಪದಾಧಿಕಾರಿಗಳಾದ ಮಧುರಚೆನ್ನ ಶಾಸ್ತ್ರಿ, ಮಹಾಬಲೇಶ್ವರ ರೆಡ್ಡಿ, ಉದ್ಯಮಿ ಶ್ರೀನಿವಾಸ್‌ ರಾವ್‌ ಇದ್ದರು.

ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಆದ್ಯ, ಐಸಿರಿ, ಅಶ್ವಿನಿ ಅವರಗೆ ಪ್ರಮಾಣ ಪತ್ರ ನೀಡಲಾಯಿತು. 80 ವರ್ಷದ ಬೆಣ್ಣಿ ಸುಶೀಲಮ್ಮನವರು ವಚನಗಳನ್ನು ಹಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !