‘ತತ್ವಪದಗಳ ಮುಖೇನ ಸಮಾಜ ಸುಧಾರಣೆ’

7

‘ತತ್ವಪದಗಳ ಮುಖೇನ ಸಮಾಜ ಸುಧಾರಣೆ’

Published:
Updated:
Deccan Herald

ಹೊಸಪೇಟೆ: ಗಾನಗಂಗಾ ಕಲಾ ಪ್ರತಿಷ್ಠಾನದಿಂದ ಭಾನುವಾರ ಸಂಜೆ ನಗರದಲ್ಲಿ ಸಂತ ಶಿಶುನಾಳ ಶರೀಫರ ಜಯಂತಿ ಅಂಗವಾಗಿ ತತ್ವಪದಗಳ ಗಾಯನ ಹಾಗೂ ಭಾವೈಕ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರಗತಿಪರ ಚಿಂತಕ ಎ. ಕರುಣಾನಿಧಿ, ನಿವೃತ್ತ ಅಧಿಕಾರಿ ಬಸಪ್ಪ ಮೆಡ್ಲೇರಿ, ದಲಿತ ಮುಖಂಡರಾದ ಹುಲುಗಪ್ಪ, ಕಣಿವಿಹಳ್ಳಿ ಮಂಜುನಾಥ, ಕಟ್ಟೆ ವಿರೂಪಾಕ್ಷಪ್ಪ, ಮುಖ್ಯ ಲೆಕ್ಕ ಪರಿಶೋಧಕ ಎ.ಎಂ. ಗುರುಮುರ್ತಿ, ಸಂಗೀತ ಭಾರತಿ ಅಧ್ಯಕ್ಷ ಕಲ್ಲಂ ಭಟ್‌, ಮುಖ್ಯಶಿಕ್ಷಕ ಇನಾಯತ್‌ ಉಲ್ಲಾ, ಬಸವ ಬಳಗದ ಮಧುರ ಚೆನ್ನಶಾಸ್ತ್ರಿ, ಸಮಾಜ ಸೇವಕ ಶಫಿ ಬರಕಾತಿ ಅವರಿಗೆ ಭಾವೈಕ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ರಂಗಕರ್ಮಿ ಪಿ. ಅಬ್ದುಲ್ಲಾ ಮಾತನಾಡಿ, ‘ಸಂತ ಶಿಶುನಾಳ ಶರೀಫರು ತತ್ವಪದಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ್ದರು. ಕೇವಲ ಅವರ ಹೆಸರು ಹೇಳಿದರೆ ಸಾಲದು. ಅವರು ತೋರಿಸಿಕೊಟ್ಟ ದಾರಿಯಲ್ಲಿ ಮುನ್ನಡೆಯಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದ ಸಂಡೂರಿನ ವಿರಕ್ತ ಮಠದ ಪ್ರಭು ಸ್ವಾಮೀಜಿ ಮಾತನಾಡಿ, ‘ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ದೊಡ್ಡದು. ಇಡೀ ಮಾನವ ಸಂಕುಲದ ಕಲ್ಯಾಣಕ್ಕೆ ಎಲ್ಲರೂ ಶ್ರಮಿಸಬೇಕು’ ಎಂದು ಹೇಳಿದರು.

ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಭಂಡಾರ್‌, ಅಹನಾ ಸೌಹಾರ್ದ ಕೋ ಆಪರೇಟಿವ್‌ ಲಿಮಿಟೆಡ್‌ನ ಕಟ್ಟಾ ನಂಜಪ್ಪ, ಕೆ. ವೀರಭದ್ರಪ್ಪ ಇದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !