ಅನಕ್ಷರಸ್ಥೆ ಅಶ್ವ ಪಾರ್ವತಮ್ಮನ ಜನಪದ ಕಲಾ ಸೇವೆ

7

ಅನಕ್ಷರಸ್ಥೆ ಅಶ್ವ ಪಾರ್ವತಮ್ಮನ ಜನಪದ ಕಲಾ ಸೇವೆ

Published:
Updated:
Deccan Herald

ಕಂಪ್ಲಿ: ‘ಗಂಗಮ್ಮ ಗೌರಮ್ಮ ವಾದಿ ಮಾಡುವರು, ಗಂಗಮ್ಮ ಗೌರಮ್ಮ ಜೂಜನಾಡುವರು, ಯಾಕಯ್ಯ ಶಿವರಾಯ ಇಬ್ಬರು ಹೆಂಡಿರು, ವಾದಾಡಿ ಶಿವರಾಯ ಸವತಿನೇ ತಂದ, ಹೋಗು ಬ್ಯಾಡೆಂದೆ ಹೋದಲ್ಲೋ ಶಿವನೆ, ತರಬ್ಯಾಡದ ಗಂಗೇನ ನೀನು ತಂದೀಯ, ವಾದಿಲ್ಲದ ಮನಿಯಲ್ಲಿ ವಾದಿ ತಂದೀಯ, ಇಬ್ಬರಿಗೂ ಈ ವಾದ ನೀನೇಳಲಾರೆ, ಇಬ್ಬರಿಗೂ ಜಗಳ ಹಚ್ಚಿ ನಗುತ್ತಿದ್ದೀಯ, ಗಂಗೇನನ್ನಾ ಬಿಡು ಇಲ್ಲ ನನ್ನನ್ನು ಬಿಡು...’

ಹೀಗೆ ಗಂಗೆ- ಗೌರಿಯರ ಪ್ರೀತಿ, ಮುನಿಸು, ಸವತಿ ಮಾತ್ಸರ್ಯ ಜಗಳದ ಕಥನವನ್ನು ಕಾವ್ಯರೂಪದಲ್ಲಿ ಮನೆ ಮನೆಗಳಿಗೆ ತೆರಳಿ ಪ್ರಸ್ತುತಪಡಿಸುವ ಹಳೆ ದರೋಜಿ ಕಲಾ ಗ್ರಾಮದ ಅಲೆಮಾರಿ ಅಶ್ವ ಪಾರ್ವತಮ್ಮ ಅಪ್ಪಟ ಗ್ರಾಮೀಣ ಜನಪದ ಪ್ರತಿಭೆ.

ಅನಕ್ಷರಸ್ಥೆಯಾಗಿರುವ ಈ ಕಲಾವಿದೆ 79ರ ಇಳಿವಯಸ್ಸಿನಲ್ಲಿಯೂ ಗಂಗೆ ಗೌರಿ ಕಟ್ಟಿಗೆ ಗೊಂಬೆಗಳಿಗೆ ಅಲಂಕಾರ ಮಾಡಿ, ಕೈಯಲ್ಲಿ ಹಿಡಿದು ಮನೆಗಳಿಗೆ ತೆರಳಿ ತಮ್ಮ ಕಂಚಿನ ಕಂಠದ ಮೂಲಕ ಹಾಡಿ ಮನೆಯವರು ನೀಡುವ ಕಾಳು ಕಡಿ ಸ್ವೀಕರಿಸುತ್ತಾರೆ. ಕೆಲವರು ಇವರನ್ನು ಮನೆಗೆ ಕರೆಸಿಕೊಂಡು ಹಾಡು ಕೇಳುತ್ತಾರೆ. ಇವರ ಹಾಡು ಕೇಳುತ್ತಿದ್ದರೆ ಎಂತಹವರು ತಲೆ ಆಡಿಸುತ್ತಾರೆ. ಅಂತಹ ಮೋಡಿ ಅವರ ಕಂಠದಲ್ಲಿದೆ.

‘ಶಿವನ ಪತ್ನಿಯಾದ ಗೌರಿಗೆ ಶಿವನ ಎಡ ತೊಡೆಯೇ ಆಸನ. ಗಂಗೆ ಪ್ರಾಸಂಗಿಕವಾಗಿ ಬಂದವಳು. ಆದರೂ ಅವಳಿಗೆ ಶಿವನ ತಲೆಯ ಮೇಲೆ ಸ್ಥಾನ. ಶಿವನ ಪ್ರೇಮಕ್ಕಾಗಿ ಉಗ್ರವಾದ ತಪಸ್ಸು ಮಾಡಿ ಅವನನ್ನು ವರಿಸಿ ಮದುವೆಯಾದ ಪತ್ನಿ(ಗೌರಿ) ಸಮ್ಮುಖದಲ್ಲಿಯೇ ಈ ರೀತಿ ಅನ್ಯ ಸ್ತ್ರೀಯೊಬ್ಬಳು ತನ್ನ ಪತಿಯ ತಲೆಯ ಮೇಲೆ ಕುಳಿತುಕೊಳ್ಳುವಷ್ಟು ಸ್ವತಂತ್ರಳಾದಳೆ, ಮೆಚ್ಚಿ ಬಂದವಳೆ ಹೆಚ್ಚಾದಳೇನೊ ಎನ್ನುವುದನ್ನು ಕಾವ್ಯ ರೂಪದಲ್ಲಿ ಹೇಳುತ್ತೇನೆ’ ಎಂದು ಪಾರ್ವತಮ್ಮ ವಿವರಿಸಿದರು.

‘ಕಲಾವಿದರ ಮಾಸಾಶನ ಸಾಲುವುದಿಲ್ಲ. ಕಲಾಸಕ್ತರು ತಮ್ಮ ಕಲೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿದಲ್ಲಿ ಹೊಟ್ಟೆ ಹೊರೆಯಲು ಹೆಚ್ಚಿನ ಅನುಕೂಲವಾಗುತ್ತದೆ’ ಎಂದು ಪಾವರ್ತಮ್ಮ ಮನದಾಳ ಬಿಚ್ಚಿಟ್ಟರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !