ಸೋಮವಾರ, ಮೇ 17, 2021
23 °C

ಪಾದರಕ್ಷೆ ಕೆಲಸ ₹8.11 ಲಕ್ಷಕ್ಕೆ ಹರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇಗುಲಕ್ಕೆ ಬರುವ ಭಕ್ತರ ಪಾದರಕ್ಷೆ ನೋಡಿಕೊಳ್ಳುವ ಜವಾಬ್ದಾರಿ ಕೆಲಸವನ್ನು ₹8.11 ಲಕ್ಷಕ್ಕೆ ಹರಾಜಾಯಿತು.

ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌ ಅವರ ಅಧ್ಯಕ್ಷತೆಯಲ್ಲಿ ದೇಗುಲದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಒಂದು ವರ್ಷದ ಅವಧಿಗೆ ಹರಾಜು ಪ್ರಕ್ರಿಯೆ ನಡೆಯಿತು.  ಮಾರೆಪ್ಪ ಹಂಪಿ ಅವರು ₹8.11 ಲಕ್ಷಕ್ಕೆ ಪಾದರಕ್ಷೆ ನೋಡಿಕೊಳ್ಳುವ ಕೆಲಸ ತಮ್ಮದಾಗಿಸಿಕೊಂಡರು. ಶರಣಪ್ಪ ಹಂಪಿ ಅವರು ₹10.51 ಲಕ್ಷಕ್ಕೆ ಪುಸ್ತಕ ಮಳಿಗೆ, ಗುತ್ತಲ ನಾಗರಾಜ ಅವರು ₹7.51 ಲಕ್ಷಕ್ಕೆ ಕಲ್ಲು ಸಕ್ಕರೆ ಪ್ರಸಾದದ ಪಾಕೆಟ್‌ ತಯಾರಿಕೆ ಕೆಲಸವನ್ನು ಪಡೆದರು.

ಮುಜರಾಯಿ ಇಲಾಖೆಯ ಪರಿವೀಕ್ಷಕ ಹನುಮಂತಪ್ಪ, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್‌. ಪ್ರಕಾಶ್‌ ರಾವ್‌, ಹಂಪಿ ಪೊಲೀಸ್‌ ಠಾಣೆ ಸಿ.ಪಿ.ಐ. ರವಿಕುಮಾರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು