ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಆವರಣದಲ್ಲೇ ಪೋಷಕರ ಹೊಡೆದಾಟ

Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಕಾರವಾರ: ಮಕ್ಕಳ ಜಗಳದಲ್ಲಿ ಮಧ್ಯಪ್ರವೇಶ ಮಾಡಿದ ಪೋಷಕರು ಒಬ್ಬರಿಗೊಬ್ಬರು ಚಪ್ಪಲಿಯಿಂದ ಹೊಡೆದುಕೊಂಡು, ಕಲ್ಲು ತೂರಿಕೊಂಡ ಪ್ರಕರಣ ಅಂಕೋಲಾ ತಾಲ್ಲೂಕಿನ ಹಾರವಾಡ ಗಾಬಿತವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದಿದೆ.

ಮೂರು ದಿನಗಳ ಹಿಂದೆ ಇದೇ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿಗಳು ಜಗಳ ಮಾಡಿಕೊಂಡಿದ್ದರು. ಇದನ್ನೇ ನೆಪ ಮಾಡಿಕೊಂಡಿದ್ದ ವಿದ್ಯಾರ್ಥಿಯೊಬ್ಬನ ತಾಯಿ ಸವಿತಾ (ಹೆಸರು ಬದಲಿಸಿದೆ) ಹಾಗೂ ಆತನ ಅಜ್ಜಿ ಮತ್ತೊಬ್ಬ ವಿದ್ಯಾರ್ಥಿಗೆ ಶಾಲಾ ಆವರಣದಲ್ಲೇ ಚಪ್ಪಲಿಯಿಂದ ಹೊಡೆದಿದ್ದರು. ಈ ವಿಚಾರವಾಗಿ ಗ್ರಾಮದ ಪ್ರಮುಖರು ಹೊಡೆಸಿಕೊಂಡ ವಿದ್ಯಾರ್ಥಿ ಹಾಗೂ ಅವನ ತಾಯಿ ಕವಿತಾ (ಹೆಸರು ಬದಲಿಸಿದೆ) ಅವರೊಂದಿಗೆ ಶಾಲೆಗೆ ತೆರಳಿ ಘಟನೆ ಕುರಿತು ಶಿಕ್ಷಕರನ್ನು ಪ್ರಶ್ನಿಸಿದರು. ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿಯು ಗುರುವಾರ ಬೆಳಿಗ್ಗೆ ಪೋಷಕರ ಸಭೆ ಕರೆದಿತ್ತು.

</p><p>ಸ್ಥಳೀಯರು ಹೇಳುವ ಪ್ರಕಾರ, ಬೆಳಿಗ್ಗೆ 10ಕ್ಕೆ ಸಭೆ ಆರಂಭವಾಗುತ್ತಿದ್ದಂತೆ ಪೋಷಕರು ಪರಸ್ಪರ ದೂಷಿಸಲು ಆರಂಭಿಸಿದರು. ಸವಿತಾ ತಮ್ಮ ಚೀಲದಲ್ಲಿ ಕಲ್ಲುಗಳನ್ನು ತುಂಬಿಕೊಂಡು ಬಂದಿದ್ದರು. ಅವರ ವರ್ತನೆಯನ್ನು ಖಂಡಿಸಿ ಕ್ಷಮೆ ಕೇಳುವಂತೆ ಸಭೆಯಲ್ಲಿದ್ದ ಮುಖಂಡರು ಒತ್ತಾಯಿಸಿದರು. ಆದರೆ, ಇದಕ್ಕೆ ಒಪ್ಪದ ಅವರು ಕೆಂಡಾಮಂಡಲವಾಗಿ, ಚೀಲದಿಂದ ಕಲ್ಲನ್ನು ತೆಗೆದು ಪೋಷಕರ ಮೇಲೆ ತೂರಲು ಆರಂಭಿಸಿದರು. ಅವರೊಂದಿಗಿದ್ದ ಅಜ್ಜಿಯೂ ಜಗಳಕ್ಕಿಳಿದರು. ಇದರಿಂದ ಅಲ್ಲಿದ್ದವರೂ ಆಕ್ರೋಶಗೊಂಡು ಪ್ರತಿಯಾಗಿ ಸವಿತಾ ಅವರಿಗೆ ಹೊಡೆದರು. ಬಳಿಕ ಪೋಷಕರು ಶಾಲಾ ಆವರಣದಲ್ಲಿದ್ದ ದೂಳು, ಮರಳು, ಕೋಲುಗಳನ್ನು ಪರಸ್ಪರರ ಮೇಲೆ ತೂರಾಡಿಕೊಂಡರು.</p><p>ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಸವಿತಾ ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ಸುರೇಶ ಹಾಗೇರ್ ದೂರು ನೀಡಿದ್ದಾರೆ ಎಂದು ಅಂಕೋಲಾ ಠಾಣೆ ಪೊಲೀಸರು ತಿಳಿಸಿದ್ದಾರೆ.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT