ಹಂಪಿಯಲ್ಲಿ ಶ್ರಾವಣ ವಿಶೇಷ ಪೂಜೆ

7

ಹಂಪಿಯಲ್ಲಿ ಶ್ರಾವಣ ವಿಶೇಷ ಪೂಜೆ

Published:
Updated:
Deccan Herald

ಹೊಸಪೇಟೆ: ಶ್ರಾವಣ ಮಾಸದ ಎರಡನೇ ಸೋಮವಾರ ತಾಲ್ಲೂಕಿನ ಹಂಪಿಯಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನದ ವಿರೂಪಾಕ್ಷನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಹಂಪಿ ವಿದ್ಯಾರಣ್ಯ ಸ್ವಾಮೀಜಿ ಅವರು ಅಭಿಷೇಕ ಮಾಡಿ, ಹೂವಿನಿಂದ ಅಲಂಕರಿಸಿ, ಆರತಿ ಬೆಳಗಿ ಪೂಜೆ ಸಲ್ಲಿಸಿದರು. ವಿವಿಧ ಕಡೆಗಳಿಂದ ಬಂದಿದ್ದ ಜನ ತುಂಗಭದ್ರಾ ನದಿಯಲ್ಲಿ ಮಿಂದೆದ್ದು, ವಿರೂಪಾಕ್ಷನ ದರ್ಶನ ಪಡೆದರು.

ನೆರೆಯ ಕೊಪ್ಪಳ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಗದಗ ಸೇರಿದಂತೆ ಇತರೆ ಕಡೆಗಳಿಂದ ಜನ ಬಂದಿದ್ದರು. ದಿನವಿಡೀ ದೇಗುಲದ ಆವರಣದಲ್ಲಿ ಜನಜಾತ್ರೆ ಇತ್ತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !