ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ರಿಂದ ಕಬ್ಬು ಕಟಾವಿಗೆ ಡಿಸಿ ಸೂಚನೆ

ಸಾಗಾಣಿಕೆ ಮತ್ತು ಇತರೆವೆಚ್ಚ ಭರಿಸಿದ ನಂತರ ಕಾರ್ಖಾನೆ ಆಸ್ತಿ ಮುಟ್ಟುಗೋಲು ತೆರವು
Last Updated 10 ಡಿಸೆಂಬರ್ 2018, 15:22 IST
ಅಕ್ಷರ ಗಾತ್ರ

ಬಳ್ಳಾರಿ: ಸಿರುಗುಪ್ಪದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯಲ್ಲಿರುವ ಕಬ್ಬು ಕಡಿಯುವವರಿಂದ 2017ರ ಅಕ್ಞೋಬರ್ ಮತ್ತು ನವೆಂಬರ್‌ನಲ್ಲಿ ಬಿತ್ತನೆ ಮಾಡಿರುವ ರೈತರ ಕಬ್ಬನ್ನುಡಿ.12ರಿಂದ ಕಟಾವು ಮಾಡಬೇಕು. ನಿರ್ಲಕ್ಷ್ಯವಹಿಸಿದರೆ, ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾದ್ ಮನೋಹರ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಸೋಮವಾರ ಸಂಜೆ ನಡೆದ ಕಬ್ಬು ಬೆಳೆಗಾರರ ಸಂಘದ ಮುಖಂಡರು ಹಾಗೂ ವಿವಿಧ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಡಿ.15ರಿಂದ ಎನ್‍ಎಸ್‍ಎಲ್ಸ ಕ್ಕರೆಕಾರ್ಖಾನೆಯ ನೊಂದಾಯಿತ ರೈತರ ಕಬ್ಬು ಕಟಾವು ಮಾಡಲು ತಯಾರಿಸಿದ ರೈತರ ಪಟ್ಟಿ ಪ್ರಕಾರ, ಮೈಲಾರ್ ಶುಗರ್ಸ್‍ ನವರು 5, ವಿಜಯನಗರ ಶುಗರ್ಸ್ 5, ಶಾಮನೂರು ಶುಗರ್ಸ್ 10, ಕೋರಗ್ರೀನ್ ಶುಗರ್ಸ್ 10 ಹಾಗೂ ದಾವಣಗೆರೆ ಶುಗರ್ಸ್ 10 ಕಬ್ಬು ಕಟಾವು ಮಾಡುವ ಗ್ಯಾಂಗ್‍ಗಳನ್ನು ನಿಯೋಜಿಸಬೇಕು ಎಂದು ಸೂಚಿಸಿದರು.

ಕಟಾವು ಮಾಡಿದ ಕಬ್ಬು ಸಾಗಾಣಿಕೆ ವೆಚ್ಚ ಹಾಗೂ ಟೋಲ್‍ಗೇಟ್ ಶುಲ್ಕ ಮತ್ತು ಇತರೆ ಖರ್ಚುಗಳನ್ನು ದೇಶನೂರು ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯವರೆ ವಿವಿಧ ಕಾರ್ಖಾನೆಯವರಿಗೆ ಭರಿಸಬೇಕು ಎಂದಾಗ ಇದಕ್ಕೆ ಕಾರ್ಖಾನೆ ಅಧಿಕಾರಿಗಳು ಒಪ್ಪಿದರು.

ಕಳೆದ ವರ್ಷದ ರೈತರ ಬಾಕಿ ಹಣವನ್ನು ಈ ವರ್ಷದ ಕಬ್ಬು ಸಾಗಾಣಿಕೆಯ ವ್ಯತ್ಯಾಸದ ಮೊತ್ತವನ್ನು ಭರಿಸಿದ ನಂತರ ನೀಡತಕ್ಕದ್ದು. ರೈತರಿಗೆ ಸಾಗಾಣಿಕೆ ವ್ಯತ್ಯಾಸದ ಮೊತ್ತ ಹಾಗೂ ಇತರೆ ಬಾಕಿಯನ್ನು ಭರಿಸಿದ ನಂತರ ಮುಟ್ಟುಗೋಲು ಹಾಕಿಕೊಂಡಿರುವ ಕಾರ್ಖಾನೆಯ ಆಸ್ತಿ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ಮೊದಲು ನಾಟಿ ಮಾಡಿದವರಿಗೆ ಆದ್ಯತೆ: ಮೊದಲು ನಾಟಿ ಮಾಡಿದವರಿಗೆ ಆದ್ಯತೆ ‍ಪ್ರಕಾರ ಕಬ್ಬು ಕಟಾವು ಮಾಡಬೇಕು. ಎನ್‍ಎಸ್‍ಎಲ್ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಸಾಗಿಸುವಾಗ ರೈತರು ವಾಹನದಲ್ಲಿ ಇದ್ದು, ತೂಕ ಮಾಡಿಸಿ ರಸೀದಿ ಪಡೆಯಬೇಕು. ಕಬ್ಬು ಲೋಡ್ ಆದ ನಂತರ 8-12ಗಂಟೆಯೊಳಗೆ ಕಬ್ಬು ಪಡೆದ ಕಾರ್ಖಾನೆಗಳು ರಸೀದಿ ನೀಡಬೇಕು. ಟೋಕನ್ ಪದ್ದತಿ ವ್ಯವಸ್ಥೆ ಇದ್ದರೆ, ಅದನ್ನೇ ಅನುಸರಿಸುವಂತೆ ಹೇಳಿದರು.

ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ, ಮೈಲಾರ ಶುಗರ್ಸ್, ವಿಜಯನಗರ ಶುಗರ್ಸ್, ದಾವಣಗೆರೆ ಶುಗರ್ಸ್, ಶಾಮನೂರು ಶುಗರ್ಸ್, ಕೋರಗ್ರೀನ್ ಶುಗರ್ಸ್ ಪ್ರತಿನಿಧಿಗಳು, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರು ಮತ್ತು ಮುಖಂಡರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT