ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ಕೊಡಿ

7
ತಾಲ್ಲೂಕು ಸಮಾವೇಶದಲ್ಲಿ ಡಿವೈಎಫ್‌ಐ ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ್‌ ಹೇಳಿಕೆ

ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ಕೊಡಿ

Published:
Updated:
Deccan Herald

ಹೊಸಪೇಟೆ: ‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ನೀಡಿರುವ ಭರವಸೆಯಂತೆ ರಾಜ್ಯದಲ್ಲಿನ ಎಲ್ಲ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ಕೊಡಲು ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಭಾರತ ಯುವಜನ ಪ್ರಜಾಸತ್ತಾತ್ಮಕ ಫೆಡರೇಶನ್‌ (ಡಿ.ವೈ.ಎಫ್‌.ಐ.) ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ್‌ ಹೇಳಿದರು.

‘ಬಹುಸಂಸ್ಕೃತಿಯ ಉಳಿವಿಗಾಗಿ –ಯುವಜನರ ಉದ್ಯೋಗಕ್ಕಾಗಿ’ ಶೀರ್ಷಿಕೆ ಅಡಿಯಲ್ಲಿ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಫೆಡರೇಶನ್‌ ತಾಲ್ಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದಲ್ಲಿ ಅಧಿಕಾರಕ್ಕೆ ಬಂದೊಡನೆ ಎಲ್ಲ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದರು. ಈಗಾಗಲೇ ವಿಳಂಬವಾಗಿದೆ. ಅದರ ಜಾರಿಗೆ ಇನ್ನಷ್ಟು ತಡ ಮಾಡುವುದು ಬೇಡ. ಜತೆಗೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಇಸ್ರೇಲ್‌ ಮಾದರಿಯಲ್ಲಿ ಕೃಷಿ ನೀತಿ ಜಾರಿಗೆ ತರಬೇಕು. ಕೃಷಿಯಲ್ಲಿ ಹೆಚ್ಚೆಚ್ಚೂ ಯುವಜನರು ತೊಡಗಿಸಿಕೊಳ್ಳಬೇಕು. ಅದಕ್ಕೆ ಸರ್ಕಾರ ಸೂಕ್ತ ನೆರವು, ಪ್ರೋತ್ಸಾಹ ನೀಡಬೇಕು. ಕೃಷಿ ಲಾಭದಾಯಕ ಉದ್ಯಮವಾಗಿ ಬದಲಾಯಿಸಲು ಹೆಚ್ಚಿನ ನೆರವು ಕೊಡಬೇಕು’ ಎಂದರು.

‘ಯುವಜನರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ವಿಷಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದರಿಂದಾಗಿ ಈ ಸಮಸ್ಯೆ ದಿನದಿಂದ ದಿನಕ್ಕೆ ದೊಡ್ಡ ಸ್ವರೂಪ ಪಡೆದುಕೊಳ್ಳುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿ ಕೂಡ ಹದಗೆಡುತ್ತಿದೆ. ಜ್ವಲಂತ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಕೋಮು ವಿಷ ಬೀಜ ಬಿತ್ತಲಾಗುತ್ತಿದೆ. ಗುಂಪು ದಾಳಿ ನಡೆಸಲಾಗುತ್ತಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಅಭಿಪ್ರಾಯಪಟ್ಟರು.

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ (ಸಿ.ಐ.ಟಿ.ಯು.) ಜಿಲ್ಲಾ ಖಜಾಂಚಿ ಎಂ. ಗೋಪಾಲ್‌, ‘ಭಾರತ ಬಹುಸಂಸ್ಕೃತಿಯ ನೆಲೆಬೀಡು. ದೇಶದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಬಹುಸಂಸ್ಕೃತಿಯನ್ನು ರಕ್ಷಿಸುವುದು ಅದರ ಕರ್ತವ್ಯ. ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ, ಕೆಲಸ ಮಾಡಬೇಕು. ಅದು ಇನ್ನು ಗಟ್ಟಿಯಾಗುತ್ತದೆ. ಈ ದಿಸೆಯಲ್ಲಿ ನಮ್ಮ ಸಂಘಟನೆ ರಚನಾತ್ಮಕವಾದ ಕೆಲಸಗಳನ್ನು ಮಾಡುತ್ತಿದೆ. ಯುವಜನರ ಆರ್ಥಿಕ ಭದ್ರತೆಗಾಗಿ ದೊಡ್ಡ ಮಟ್ಟದ ಹೋರಾಟವನ್ನು ಶೀಘ್ರದಲ್ಲೇ ಆರಂಭಿಸಲಿದೆ’ ಎಂದು ಹೇಳಿದರು.

‘ಕಾರ್ಮಿಕ ನೀತಿಗಳನ್ನು ಮೋದಿ ಸರ್ಕಾರ ಬದಲಿಸಲಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮಣೆ ಹಾಕುತ್ತಿದೆ. ಜನಸಾಮಾನ್ಯರ ವಿರೋಧಿ ನೀತಿಗಳನ್ನು ಜಾರಿಗೆ ತರಲಾಗಿದೆ. ಬಿಜೆಪಿಯನ್ನು ಸೋಲಿಸಲು

ತಾಲ್ಲೂಕು ಆಟೊ ಚಾಲಕರ ಸಂಘದ ಕೆ.ಎಂ.ಸಂತೋಷ್‌ಕುಮಾರ್‌, ಡಿ.ವೈ.ಎಫ್‌.ಐ.ಜಿಲ್ಲಾ ಕಾರ್ಯದರ್ಶಿ ಅರ್ಜುನ್‌ ಇದ್ದರು. 

ಇದೇ ವೇಳೆ ಡಿವೈಎಫ್‌ಐ ನೂತನ ತಾಲ್ಲೂಕು ಅಧ್ಯಕ್ಷರಾಗಿ ಕಿನ್ನಾಳ್‌ ಹನುಮಂತ ಅವರನ್ನು ನೇಮಕ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !