ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾರ್ದನ ರೆಡ್ಡಿ ಇದ್ದಿದ್ರೆ ರಾಮುಲು ಬೇಗ ಡಿಸಿಎಂ ಆಗ್ತಿದ್ರು: ಸೋಮಶೇಖರ ರೆಡ್ಡಿ

Last Updated 16 ಡಿಸೆಂಬರ್ 2019, 7:44 IST
ಅಕ್ಷರ ಗಾತ್ರ

ಬ‌ಳ್ಳಾರಿ: ‘ಜನಾರ್ದನ ರೆಡ್ಡಿ ಇದ್ದಿದ್ದರೆ ಶ್ರೀರಾಮುಲು ಅವರಿಗೆ ರಾಜಕೀಯದಲ್ಲಿ ಮತ್ತಷ್ಟು ಬಲ ಬರುತ್ತಿತ್ತು. ಅವರು ಇನ್ನೂ ಬೇಗ ಡಿಸಿಎಂ ಆಗಿರುತ್ತಿದ್ದರು’ ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎನ್ನುವುದು ಈ ಭಾಗದ ಜನರ ಬೇಡಿಕೆಯಾಗಿದೆ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಅವರು. ಉನ್ನತ ಮಟ್ಟದಲ್ಲಿ ಬೆಳೆದಿದ್ದಾರೆ. ಈ ಬಗ್ಗೆ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ತಿಳಿಸಿದರು.

‘ಕಾಲ ಚಕ್ರ ಹೀಗೆಯೇ ಇರುವುದಿಲ್ಲ. ಬದಲಾಗುತ್ತಿರುತ್ತದೆ. ಕೆಳಗಿದ್ದವರು ಮೇಲೆ ಬರಲೇಬೇಕು. ಅಭಿವೃದ್ಧಿ ವಿಚಾರದಲ್ಲಿ ಬಳ್ಳಾರಿ ಹಿಂದೆ ಉಳಿದಿಲ್ಲ. ಕೆಲವೊಮ್ಮ ಕೆಲ ಜಿಲ್ಲೆಗಳು ಪ್ರಭಾವ ಬೀರುತ್ತವೆ’ ಎಂದರು.

’ರಾಜಕೀಯ ಅಂದ್ರೆ ಹೀಗೆಯೇ.2008 ರಲ್ಲಿ ಭಾರಿ ಪ್ರಬಲರಾಗಿದ್ದೆವು.ಈಗಲೂ ಪ್ರಬಲರಾಗಿಯೇ ಇದ್ದೇವೆ. ಭಗವಂತ ನಮ್ಮನ್ನು ದುಬರ್ಲರನ್ನಾಗಿ ಮಾಡಬಹುದೇ ಹೊರತು ಬೇರೆ ಯಾರಿಂದಲೂ ಅದು ಸಾಧ್ಯವಿಲ್ಲ’ ಎಂದು ತಿಳಿಸಿದರು.

ವಿಜಯನಗರ ಜಿಲ್ಲೆ ಕುರಿತು ಮಾತನಾಡಿದ ಅವರು, ‘ಚುನಾವಣೆ ನಂತರ ಜಿಲ್ಲೆ ವಿಭಜನೆ ಬಗ್ಗೆ ಯೋಚಿಸುವೆವು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಜಿಲ್ಲೆ ಅಖಂಡವಾಗಿರಬೇಕು ಎನ್ನುವುದೇ ನನ್ನ ನಿಲುವು’ ಎಂದು ಸ್ಪಷ್ಟಪಡಿಸಿದರು.ಯನ್ನು ಒಡೆಯುವುದು ಬೇಡ ಎಂದು ನಾನು ಆನಂದ್‌ ಸಿಂಗ್‌ ಬಳಿ ಮನವಿ ಮಾಡುತ್ತೇನೆ.ಶಾಸಕರಾದ ಕರುಣಾಕರರೆಡ್ಡಿ, ಗೋಪಾಲಕೃಷ್ಣ, ಸೋಮಲಿಂಗಪ್ಪ ಅವರೂ ಜಿಲ್ಲೆ ಅಖಂಡವಾಗಿರಲಿ ಎಂದೇ ಹೇಳಿದ್ದಾರೆ.ಅಂದಿನ ಸಭೆಗೆ ಬಂದವರಲ್ಲಿ 90% ಜಿಲ್ಲೆ ವಿಭಜನೆ ಬೇಡ ಎಂದೇ ಅಭಿಮತ ಸೂಚಿಸಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT