ಶನಿವಾರ, ಡಿಸೆಂಬರ್ 4, 2021
20 °C

ಮೋದಿ ಜನ್ಮದಿನ; ಹಂಪಿಯಲ್ಲಿ ಪೂಜೆ, ಸ್ವಚ್ಛತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ತಾಲ್ಲೂಕಿನ ಹಂಪಿಯಲ್ಲಿ ಗುರುವಾರ ಆಟೊ ಚಾಲಕರು ಹಾಗೂ ವಿರೂಪಾಕ್ಷಿ ಯುವಕರ ತಂಡದವರು ಸ್ವಚ್ಛತಾ ಕಾರ್ಯ ಕೈಗೊಂಡರು.

ಅದಕ್ಕೂ ಮುನ್ನ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತೆಂಗಿನಕಾಯಿ, ಹೂವಿನ ವ್ಯಾಪಾರಿಗಳಿಗೆ ಬಟ್ಟೆ ಕೈಚೀಲ ಕೊಟ್ಟು ಪ್ಲಾಸ್ಟಿಕ್‌ ಬಳಸದಂತೆ ಅರಿವು ಮೂಡಿಸಿದರು. ನಂತರ ರಥಬೀದಿ, ವಿರೂಪಾಕ್ಷ ಬಜಾರ್‌ ಹಾಗೂ ವಾಹನ ನಿಲುಗಡೆ ಜಾಗದಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿದರು.

ಮಾಸ್ಕ್‌, ಸ್ಯಾನಿಟೈಸರ್‌ ವಿತರಣೆ: ಮೋದಿ ಜನ್ಮದಿನದ ಅಂಗವಾಗಿ ‘ಮಿಷನ್‌ ಮೋದಿ ಅಗೇನ್‌ ಪಿ.ಎಂ. ಡೆಮೊಕ್ರಟಿಕ್‌ ಡೆವಲಪ್‌ಮೆಂಟ್‌ ಟ್ರಸ್ಟ್‌’ ಪದಾಧಿಕಾರಿಗಳು ನಗರದ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ಅರ್ಚಕರು, ಸಿಬ್ಬಂದಿಗೆ ಮಾಸ್ಕ್‌, ಸ್ಯಾನಿಟೈಸರ್‌ ವಿತರಿಸಿದರು.

ಟ್ರಸ್ಟ್‌ ರಾಜ್ಯ ಘಟಕದ ಉಪಾಧ್ಯಕ್ಷ ಪ್ರಲ್ಹಾದ್ ಭೂಪಾಳ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ವ್ಯಾಸರಾಜ್ ಜೋಷಿ, ಜಿಲ್ಲಾ ಅಧ್ಯಕ್ಷ ವಿನಾಯಕ ಸ್ವಾಮಿ, ಯುವ ಘಟಕದ ಜಿಲ್ಲಾ ಅಧ್ಯಕ್ಷ ಕಿಚಿಡಿ ಕೊಟ್ರೇಶ್, ಹೊಸಪೇಟೆ ತಾಲ್ಲೂಕು ಅಧ್ಯಕ್ಷ ಅಕ್ಕಿ ಬಸವರಾಜ್, ಪಿ.ಸಂದೀಪ್ ನಾಯ್ಡು, ಸೂರಿ ಬಂಗಾರು, ರಾಮಾಂಜನೇಯಲು, ಇಮ್ರಾನ್, ಮೌಲಾ ಹುಸೇನ್, ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ್ ಆಚಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು