ಶ್ರಾವಣ: ಹಂಪಿ ವಿರೂಪಾಕ್ಷೇಶ್ವರ ಸ್ವಾಮಿಗೆ ವಿಶೇಷ ಪೂಜೆ

7

ಶ್ರಾವಣ: ಹಂಪಿ ವಿರೂಪಾಕ್ಷೇಶ್ವರ ಸ್ವಾಮಿಗೆ ವಿಶೇಷ ಪೂಜೆ

Published:
Updated:
Deccan Herald

ಹೊಸಪೇಟೆ: ಶ್ರಾವಣ ಮಾಸದ ಮೊದಲ ಸೋಮವಾರ ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿಗೆ ವಿದ್ಯಾರಣ್ಯ ಭಾರತಿ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು.

ಪಂಚಾಮೃತ ಅಭಿಷೇಕ ಮಾಡಿ, ಮಹಾ ಮಂಗಳಾರತಿ ಮಾಡಿದರು. ಅದೇ ರೀತಿ ಹಂಪಿಯ ಉದ್ಧಾನ ವೀರಭದ್ರ ಸ್ವಾಮಿಗೆ ಪಂಚ ದ್ರವ್ಯಗಳಿಂದ ಅಭಿಷೇಕ, ವೀಳ್ಯದೆಲೆಗಳಿಂದ ವಿಶೇಷ ಅಲಂಕಾರ ಮಾಡಿ, ಮಹಾಮಂಗಳಾರತಿ ಮಾಡಿದರು. ಯಂತ್ರೋದ್ಧಾರಕ ಪ್ರಾಣ ದೇವರಿಗೆ, ಕೋದಂಡರಾಮ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು.

ಬೆಳಿಗ್ಗೆಯಿಂದಲೇ ವಿವಿಧ ಕಡೆಗಳಿಂದ ನೂರಾರು ಜನ ಹಂಪಿಗೆ ಬಂದಿದ್ದರು. ವಿರೂಪಾಕ್ಷೇಶ್ವರ ದೇಗುಲಕ್ಕೆ ಹೊಂದಿಕೊಂಡಿರುವ ತುಂಗಭದ್ರಾ ನದಿ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡಿ ವಿರೂಪಾಕ್ಷೇಶ್ವರ, ಪಂಪಾಂಬಿಕೆ ದೇವಿಗೆ ಹಣ್ಣು, ಕಾಯಿ ಅರ್ಪಿಸಿದರು.

ಕುಟುಂಬ ಸಮೇತರಾಗಿ ಬಂದಿದ್ದವರು ಅಲ್ಲಲ್ಲಿ ಮರದ ಕೆಳಗೆ ಕುಳಿತುಕೊಂಡು ಜತೆಗೆ ತಂದಿದ್ದ ಬುತ್ತಿ ಬಿಚ್ಚಿಕೊಂಡು ಊಟ ಮಾಡಿದರು. ನಂತರ ಸಾಸಿವೆಕಾಳು, ಕಡಲೆಕಾಳು, ರಾಣಿ ಸ್ನಾನಗೃಹ, ಕಮಲ್‌ ಮಹಲ್‌, ಗಜಶಾಲೆ, ವಿಜಯ ವಿಠಲ ದೇಗುಲಕ್ಕೆ ಭೇಟಿ ನೀಡಿದರು. ದಿನವಿಡೀ ರಥಬೀದಿಯಲ್ಲಿ ಜನಜಾತ್ರೆ ಕಂಡು ಬಂತು.

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !