ಗುರುವಾರ , ನವೆಂಬರ್ 14, 2019
19 °C

ಸ್ಪೋರ್ಟ್​ ಕಾರು ಬೆಂಕಿಗೆ ಆಹುತಿ

Published:
Updated:

ಬಳ್ಳಾರಿ: ನಗರ ಹೊರವಲಯದ ಬೈಪಾಸ್ ರಸ್ತೆಯ ಅಲ್ಲಂ ಭವನದ ಬಳಿ ಟೆಸ್ಟ್ ಡ್ರೈವ್​ ಗೆ ತಂದಿದ್ದ ಸ್ಪೋರ್ಟ್ಸ್ ಕಾರಿನ ಎಂಜಿನ್ ಬಿಸಿಯಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಇಬ್ಬರು ಯುವಕರು ಆ ಕಾರನ್ನು ಟೆಸ್ಟ್​ ಡ್ರೈವ್​ ಮಾಡಲೆಂದು ತೆಗೆದುಕೊಂಡು ಬಂದಿದ್ದರು. ಎಂಜಿನ್ ಒಳಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದನ್ನ ಸೂಕ್ಷ್ಮವಾಗಿ ಅರಿತ ಅವರು ಕೂಡಲೇ ಕಾರಿಂದ ಕೆಳಗಡೆ ಇಳಿದು ಪ್ರಾಣಾಪಯದಿಂದ ಪಾರಾಗಿದ್ದಾರೆ.

ನಿಧಾನವಾಗಿ ಬೆಂಕಿಯು ಎಲ್ಲ ಕಡೆ ಆವರಿಸಿ ಕಾರು ಸುಟ್ಟು ಕರಕಲಾಗಿದೆ. ಅಗ್ನಿಶಾಮಕದಳದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.

ಪ್ರತಿಕ್ರಿಯಿಸಿ (+)