ಗುರುವಾರ , ಸೆಪ್ಟೆಂಬರ್ 19, 2019
24 °C

ಸಿರುಗುಪ್ಪ: ಕ್ರೀಡಾಂಗಣ ಸಜ್ಜ ಕುಸಿದು ಇಬ್ಬರು ಸಾವು

Published:
Updated:

ಸಿರುಗುಪ್ಪ: ಇಲ್ಲಿನ ತಾಲ್ಲೂಕು ಕ್ರೀಡಾಂಗಣದ ಕ್ರೀಡಾ ವೀಕ್ಷಣಾ ಮೆಟ್ಟಿಲುಗಳಿಗೆ ಹೊಂದಿಕೊಂಡಂತೆ ನಿರ್ಮಿಸಲಾಗಿದ್ದ ಕಟ್ಟಡದ ಸಜ್ಜ ಶುಕ್ರವಾರ ಕುಸಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ವಿದ್ಯಾರ್ಥಿ, ಕೆ.ಬೆಳಗಲ್ಲು ಗ್ರಾಮದ ರಾಮು (18) ಮತ್ತು ಪಟ್ಟಣದ ನಿವಾಸಿ ಶಿವಕುಮಾರ್ (32) ಮೃತಪಟ್ಟವರು. ಈ ಇಬ್ಬರು ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ನೋಡಲು ಬಂದಿದ್ದರು. ಮಧ್ಯಾಹ್ನ ಊಟದ ಬಿಡುವಿನ ವೇಳೆಯಲ್ಲಿ ಸಜ್ಜೆಯ ಭಾಗದಲ್ಲಿ ಹೆಚ್ಚು ಮಂದಿ ಸಂಚರಿಸಿದಾಗ ದುರ್ಘಟನೆ ನಡೆದಿದೆ.

Post Comments (+)