ಗುರುವಾರ , ಆಗಸ್ಟ್ 11, 2022
24 °C

ಶ್ರೀರಾಮರಂಗಾಪುರ: ಪತ್ತೆಯಾಗದ ಮೃತದೇಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಂಪ್ಲಿ: ತಾಲ್ಲೂಕಿನ ಶ್ರೀರಾಮರಂಗಾಪುರ ಗ್ರಾಮದ ರಾಮಪ್ಪನ ಹಳ್ಳದ ತಾತ್ಕಾಲಿಕ ಸೇತುವೆ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಶಿವಪ್ಪ ಹೊನ್ನೂರಪ್ಪ(55) ಅವರ ಮೃತದೇಹ ಶುಕ್ರವಾರವೂ ಪತ್ತೆಯಾಗಿಲ್ಲ.

ರಾಮರಂಗಾಪುರದಿಂದ ಓರ್ವಾಯಿ ಗ್ರಾಮದ ವರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸಾರ್ವಜನಿಕರು ಮೃತ ದೇಹಕ್ಕಾಗಿ ಹಳ್ಳದಲ್ಲಿ ಶೋಧ ಕಾರ್ಯನಡೆಸಿದರು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ತಿಮ್ಮಾರೆಡ್ಡಿ ಪ್ರತಿಕ್ರಿಯಿಸಿ, ‘ಹಳ್ಳದಲ್ಲಿ ಮುಳ್ಳು ಬೇಲಿ, ಗಿಡಗಂಟಿಗಳು, ತ್ಯಾಜ್ಯ ಅಧಿಕವಾಗಿದೆ. ರಬ್ಬರ್ ಬೋಟ್ ಬಳಸಲು ಸಾಧ್ಯವಾಗಿಲ್ಲ. 11ಜನ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಸ್ಥಳೀಯರೂ ತೆಪ್ಪಗಳನ್ನು ಬಳಸಿದರು ಪ್ರಯೋಜನವಾಗಿಲ್ಲ. ಸಂಜೆ ಮಳೆಯಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ‘ ಎಂದು ವಿವರಿಸಿದರು.

‘ಶನಿವಾರ ಬೆಳಿಗ್ಗೆಯಿಂದ ಓರ್ವಾಯಿ ಗ್ರಾಮದ ಹಳ್ಳದಿಂದ ಶೋಧ ಮುಂದುವರಿಯಲಿದೆ’ ಎಂದರು.

ತಹಶೀಲ್ದಾರ್ ಗೌಸಿಯಾಬೇಗಂ, ಕುಡುತಿನಿ ಪಿಎಸ್‍ಐ ರಫಿಕ್, ಎಎಸ್‍ಐ ಗೋಪಾಲ್, ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಣ ನಾಯ್ಕ, ಪಿಡಿಒ ಅಪರಂಜಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು