ಅಸಮಾಧಾನಿತರು ಬಂದರೆ ಸರ್ಕಾರ ರಚನೆ : ಬಿ. ಶ್ರೀರಾಮುಲು

ಭಾನುವಾರ, ಜೂನ್ 16, 2019
32 °C

ಅಸಮಾಧಾನಿತರು ಬಂದರೆ ಸರ್ಕಾರ ರಚನೆ : ಬಿ. ಶ್ರೀರಾಮುಲು

Published:
Updated:

ಹೊಸಪೇಟೆ: ‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದಲ್ಲಿನ ಅಸಮಾಧಾನಿತರು ನಮ್ಮ ಪಕ್ಷಕ್ಕೆ ಬಂದರೆ ರಾಜ್ಯದಲ್ಲಿ ಸರ್ಕಾರ ರಚಿಸಿ ಉತ್ತಮ ಆಡಳಿತ ಕೊಡುತ್ತೇವೆ. ಚುನಾವಣೆಗೆ ಹೋದರೆ ಜನರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ’ ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದರು.

ತಾಲ್ಲೂಕಿನ ಕಮಲಾಪುರ ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂರೂ ಬಿಟ್ಟಿರುವ ಮಂದಿಗೆ (ಮುಖ್ಯಮಂತ್ರಿ ಕುಮಾರಸ್ವಾಮಿಗೆ) ರಾಜೀನಾಮೆ ಕೊಡುವಂತೆ ಒತ್ತಾಯಿಸುವುದಿಲ್ಲ. ಆದರೆ, ಎರಡೂ ಪಕ್ಷಗಳ ಶಾಸಕರು, ಪಕ್ಷೇತರರು ಅವರಿಂದ ದೂರವಾಗಿದ್ದಾರೆ. ಅವರು ಬೆಂಬಲ ಕೊಟ್ಟರೆ ಸರ್ಕಾರ ರಚಿಸುತ್ತೇವೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಈಗ ಮೈತ್ರಿ ಸರ್ಕಾರ ತೊಲಗದಿದ್ದರೆ ಈ ಹಿಂದಿನಂತೆ ಇನ್ನೂ ನಾಲ್ಕು ವರ್ಷ ಜನ ಇವರ ನಾಟಕ ನೋಡಿಕೊಂಡು ಇರಬೇಕಾಗುತ್ತದೆ. ಹಾಗಾಗಿ ಅವರು ಅಧಿಕಾರದಿಂದ ತೊಲಗುವುದು ಲೇಸು. ಎಚ್‌.ಡಿ.ಕೆ. ರಾಜೀನಾಮೆ ಕೊಡಬೇಕು. ನಾಟಕವಾಡುವುದು ಬಿಡಬೇಕು. ದೆಹಲಿ ಪರೇಡ್‌ ಮಾಡಿರುವುದು ಸಾಕು’ ಎಂದು ಆಗ್ರಹಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !