ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಕೋ ಬ್ಯಾಂಕ್:  1122 ಕೋಟಿ ವಹಿವಾಟು

Last Updated 3 ಏಪ್ರಿಲ್ 2019, 4:40 IST
ಅಕ್ಷರ ಗಾತ್ರ

ಬಳ್ಳಾರಿ: ಸುಕೋ ಬ್ಯಾಂಕ್ 2018-2019 ನೇ ಸಾಲಿನಲ್ಲಿ ₹1,122 ಕೋಟಿ ವಹಿವಾಟು ನಡೆಸಿದ್ದು ಒಟ್ಟು 9 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ತಿಳಿಸಿದರು.

ಬ್ಯಾಂಕ್ ನಲ್ಲಿ‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆರಿಗೆ ಪಾವತಿಯ ನಂತರ ₹4.93 ಕೋಟಿ ಲಾಭ ದೊರಕಿದೆ ಎಂದರು.

ಮಾರ್ಚ್ ಅಂತ್ಯದ ಹೊತ್ತಿಗೆ ₹1 ಸಾವಿರ ಕೋಟಿ ‌ವಹಿವಾಟು ನಡೆಸುವ ಗುರಿಗಿಂತಲೂ ₹122 ಕೋಟಿ ವಹಿವಾಟು ನಡೆಯಲು ಗ್ರಾಹಕರ ಸಹಕಾರವೇ ಕಾರಣ ಎಂದರು.

16 ಜಿಲ್ಲೆಯ 28 ಶಾಖೆಗಳಲ್ಲಿ ವಹಿವಾಟು ನಡೆಸಿ ಶೇ 40 ರಷ್ಟು ಪ್ರಗತಿ ಸಾಧಿಸಿ, ಒಟ್ಟು ₹669 ಕೋಟಿ ಠೇವಣಿ ಹೊಂದಿದೆ. ₹453 ಕೋಟಿ ಸಾಲ ‌ವಿತರಿಸಿದೆ ಎಂದರು.

ಬ್ಯಾಂಕ್‌ನ ನಿವ್ವಳ ಅನುತ್ಪಾದಕ ಆಸ್ತಿ (ಎನ್ ಪಿ ಎ) ಶೇ 1.97 ಇದ್ದು, ಬ್ಯಾಂಕ್ ನ ಆರ್ಥಿಕ ಭದ್ರತೆ ಮತ್ತು ಆರೋಗ್ಯವನ್ನು ಸೂಚಿಸುತ್ತದೆ ಎಂದರು.

ಬ್ಯಾಂಕ್ ಸೋಲಾರ್ ಶಕ್ತಿ ಯೋಜನೆಯನ್ನು ಬ್ಯಾಂಕ್ ರೂಪಿಸಿದೆ., ಅತಿ ಕಡಿಮೆ ಮಾಸಿಕ ಕಂತುಗಳಲ್ಲಿ, ಪ್ರತಿ ಕಿಲೋ ವ್ಯಾಟ್ ಗೆ 872 ರಂತೆ ಸೋಲಾರ್ ತಂತ್ರಜ್ಞಾನ ಬಳಸಿ ವಿದ್ಯುತ್ ಉತ್ಪಾದಿಸಲಾಗುವುದು. ಯೋಜನೆ ಯಲ್ಲಿ ಇದುವರೆಗೆ 300 ಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿಕೊಂಡು, ವಿದ್ಯುತ್ ಉತ್ಪಾದನೆ ಗೆ ಆಸಕ್ತಿಬತೋರಿದ್ದಾರೆ ಎಂದರು.

ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪರಿಮಳಾಚಾರ್ಯ ಎಸ್. ಅಗ್ನಹೋತ್ರಿ, ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶ್ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT