ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮರ್ಪಣಾ ಭಾವ ಅಗತ್ಯ’

Last Updated 25 ಮೇ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ಬೇರೆಯವರಿಗೆ ಉದ್ಯೋಗ ನೀಡುವವರಾಗಬೇಕೇ ಹೊರತು ಬೇರೆಯವರಲ್ಲಿ ಉದ್ಯೋಗ ಕೇಳುವವರಾಗಬಾರದು’ ಎಂದು ಮುಂಬೈನ ಡಬ್ಬಾವಾಲಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪವನ್ ಅಗರ್‌ವಾಲ್ ಕಿವಿಮಾತು ಹೇಳಿದರು.

ಜೈನ್ ಇಂಟರ್‌ನ್ಯಾಷನಲ್‌ ಟ್ರೇಡ್ ಆರ್ಗನೈಸೇಷನ್’ (ಜಿತೊ) ಬೆಂಗಳೂರು ವಿಭಾಗವು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಜಿತೊ ಗ್ರೋತ್ ಸಮಿಟ್‌’ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ‘ಸಮಯಪ್ರಜ್ಞೆ, ಕಾಯಕನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮರ್ಪಣಾ ಭಾವ ಇದ್ದರೆ ಯಶಸ್ಸು ಸಾಧ್ಯ. 127 ವರ್ಷಗಳಿಂದ ಇದನ್ನು ಪಾಲಿಸಿಕೊಂಡು ಬಂದಿರುವ ಮುಂಬೈನ ಡಬ್ಬಾವಾಲಾಗಳೇ ಇದಕ್ಕೆ ನಿದರ್ಶನ ಇವರು ಹೊಂದಿರುವ ಪೂರೈಕೆ ಸರಪಳಿಯು ವಿಶ್ವಕ್ಕೆ ಮಾದರಿ‌’ ಎಂದರು.

‘ವ್ಯವಸ್ಥೆಯನ್ನು ಅನುಸರಿಸಬೇಕು ಇಲ್ಲವೇ ಹೊಸ ವ್ಯವಸ್ಥೆಯನ್ನೇ ನೀಡುವ ಸಾಮರ್ಥ್ಯ ಹೊಂದಿರಬೇಕು.  ಜಿಎಸ್‌ಟಿ ಎಂದರೆ ಏನು ಎಂದೇ ತಿಳಿಯದೇ ಇರುವವರೂ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದನ್ನು ಅರ್ಥವೇ ಮಾಡಿಕೊಳ್ಳದೆ ವಿರೋಧಿಸುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT