ಸಿಂಡಿಕೇಟ್ ಬ್ಯಾಂಕ್ 93 ನೇ ಸಂಸ್ಥಾಪನಾ ದಿನಾಚರಣೆ 10ರಿಂದ

7

ಸಿಂಡಿಕೇಟ್ ಬ್ಯಾಂಕ್ 93 ನೇ ಸಂಸ್ಥಾಪನಾ ದಿನಾಚರಣೆ 10ರಿಂದ

Published:
Updated:

ಬಳ್ಳಾರಿ: ಸಿಂಡಿಕೇಟ್ ಬ್ಯಾಂಕ್ 93 ನೇ ಸಂಸ್ಥಾಪನಾ ದಿನಾಚರಣೆ 10 ರಿಂದ 25 ರವರೆಗೆ ನಡೆಯಲಿದೆ ಎಂದು ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಎನ್‌. ಕೃಷ್ಣಪ್ಪ ತಿಳಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಅವರು, ಪಾಕ್ಷಿಕ ದಿನಾಚರಣೆ ಪ್ರಯುಕ್ತ ಖಾಸಾ ಕ್ಯಾಂಪೇನ್, ಸಾಲ‌ ವಿತರಣೆ, ಬ್ಯಾಂಕಿಂಗ್ ಸುರಕ್ಷತೆ ಪ್ರಚಾರ ಮತ್ತು ರಕ್ತ ದಾನ ಹಮ್ಮಿಕೊಳ್ಳಲಾಗುವುದು ಎಂದರು.

93 ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ 93 ಯೂನಿಟ್ ರಕ್ತ ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದರು.

ಮೂರು ಜಿಲ್ಲೆಗಳ- ಕೊಪ್ಪಳ, ರಾಯಚೂರು- ಬಳ್ಳಾರಿ- 64 ಶಾಖೆಗಳಲ್ಲಿ 2,000 ಕೋಟಿ ರೂಪಾಯಿ ಸಾಲ ನೀಡಲಾಗಿದ್ದು, ಅದರಲ್ಲಿ 1,000 ಕೋಟಿ ರೂಪಾಯಿ ರೈತರ ಸಾಲವಿದೆ ಎಂದು ಮಾಹಿತಿ ನೀಡಿದರು.

ದಿನಾಚರಣೆಯ ಪ್ರಯುಕ್ತ ಖಾತೆ, ಠೇವಣಿ, ಸಾಲ‌ ವಿತರಣೆಯ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದರು.

ಮುಖ್ಯ‌ ವ್ಯವಸ್ಥಾಪಕ ಪವನ್‌ಕುಮಾರ್ ಉಪ ಪ್ರಾದೇಶಿಕ  ವ್ಯವಸ್ಥಾಪಕ ಪಿ.ವಿ.ರಾವ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗೋಪಾಲಕೃಷ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !