ಗುರುವಾರ , ನವೆಂಬರ್ 14, 2019
18 °C

ಸೂಕ್ಷ್ಮ ಪ್ರದೇಶಗಳಲ್ಲಿ ಭರವಸೆ ಮೂಡಿಸಿ: ಹೆಚ್ಚುವರಿ ಜಿಲ್ಲಾಧಿಕಾರಿ

Published:
Updated:

ಹೊಸಪೇಟೆ: ‘ವಿಜಯನಗರ ವಿಧಾನಸಭಾ ಕ್ಷೇತ್ರದ ಸೂಕ್ಷ್ಮ ಪ್ರದೇಶಗಳ ಜನರಲ್ಲಿ ಭರವಸೆ ಮೂಡಿಸಿ, ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗುವಂತೆ ನೋಡಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ರಾತ್ರಿ ನಗರದಲ್ಲಿ ನಡೆದ ಉಪಚುನಾವಣೆ ಸಿದ್ಧತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಮುಕ್ತ, ನ್ಯಾಯಸಮ್ಮತವಾಗಿ ಮತ ಚಲಾಯಿಸಲು ಅವಕಾಶ ಮಾಡಿಕೊಡಬೇಕು’ ಎಂದು ಹೇಳಿದರು. 

‘ಚುನಾವಣೆಗೆ ನಿಯೋಜಿತರಾದ ಸಿಬ್ಬಂದಿ ಜನರ ಬಳಿಗೆ ತೆರಳಿ ಇ.ವಿ.ಎಂ. ಮತ್ತು ವಿ.ವಿ. ಪ್ಯಾಟ್ ಪ್ರಾತ್ಯಕ್ಷಿಕೆ ಮಾಡಿ ತೋರಿಸಬೇಕು. ರ್‍ಯಾಂಪ್‌, ವೀಲ್‌ ಚೇರ್‌ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಮತಗಟ್ಟೆ ಕೇಂದ್ರಗಳಲ್ಲಿ ಕಲ್ಪಿಸಬೇಕು’ ಎಂದು ಸೂಚಿಸಿದರು. 

ಉಪವಿಭಾಗಾಧಿಕಾರಿಗಳಾದ ತನ್ವೀರ್‌ ಶೇಖ್‌ ಆಸಿಫ್‌, ರಮೇಶ ಕೋನರೆಡ್ಡಿ, ಡಿ.ವೈ.ಎಸ್ಪಿ. ವಿ. ರಘುಕುಮಾರ ಇದ್ದರು.

ಪ್ರತಿಕ್ರಿಯಿಸಿ (+)