ಬುಧವಾರ, ಸೆಪ್ಟೆಂಬರ್ 18, 2019
26 °C

ತಾಲ್ಲೂಕು ಮಟ್ಟದ ಕ್ರೀಡಾಕೂಟ ಆರಂಭ

Published:
Updated:
Prajavani

ಹೊಸಪೇಟೆ: ತಾಲ್ಲೂಕು ಮಟ್ಟದ 47ನೇ ಕ್ರೀಡಾಕೂಟ ಶುಕ್ರವಾರ ಇಲ್ಲಿನ ಮುನ್ಸಿಪಲ್‌ ಮೈದಾನದಲ್ಲಿ ಆರಂಭಗೊಂಡಿತು.

ಮೊದಲ ದಿನ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟ ಜರುಗಿತು. ಓಟ, ಕಬಡ್ಡಿ, ಕೊ ಕೊ, ವಾಲಿಬಾಲ್‌, ಥ್ರೋಬಾಲ್‌ ಸ್ಪರ್ಧೆಗಳು ಜರುಗಿದವು. ಮಕ್ಕಳು ಉತ್ಸಾಹದಿಂದ ಭಾಗವಹಿಸಿ, ಅವರ ಪ್ರತಿಭೆ ತೋರಿಸಿದರು.

ಪ್ರೌಢಶಾಲಾ ವಿಭಾಗದ ಕ್ರೀಡಾಕೂಟಗಳು ಶನಿವಾರ ನಡೆಯಲಿವೆ. ಒಂಬತ್ತು ಕ್ರೀಡಾ ವಲಯಗಳ 1,250 ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಕುಮಾರಿ ಈಶ್ವರ್‌ ಕ್ರೀಡಾಕೂಟ ಉದ್ಘಾಟಿಸಿ, ‘ಮಕ್ಕಳು ತಮ್ಮಲ್ಲಿರುವ ಪ್ರತಿಭೆ ಹೊರಹಾಕಲು ಇದು ಉತ್ತಮ ವೇದಿಕೆ. ಇಲ್ಲಿ ಉತ್ತಮ ಸಾಧನೆ ತೋರಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬಹುದು’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಷಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವ ಎರೆಗುಪ್ಪ, ಶಿಕ್ಷಣ ಇಲಾಖೆಯ ಬಸವರಾಜ ಜತ್ತಿ, ಕಿರ್ಲೊಸ್ಕರ್‌ ಕ್ಲಬ್‌ ಅಸೋಸಿಯೇಶನ್‌ ಅಧ್ಯಕ್ಷ ಕಮಲಾ ಗುಮಾಸ್ತೆ, ಮುಖ್ಯಶಿಕ್ಷಕರಾದ ಗುರುರಾಜ, ಸಣ್ಣ ಈರಣ್ಣ, ಧನರಾಜ, ಬಸವರಾಜ ಇದ್ದರು.

Post Comments (+)