ಮಂತ್ರಾಲಯ ಶ್ರೀಗಳಿಂದ ತಪ್ತ ಮುದ್ರಾಧಾರಣೆ

7

ಮಂತ್ರಾಲಯ ಶ್ರೀಗಳಿಂದ ತಪ್ತ ಮುದ್ರಾಧಾರಣೆ

Published:
Updated:
Deccan Herald

ಹೊಸಪೇಟೆ: ಮಂತ್ರಾಲಯ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಬುಧವಾರ ಇಲ್ಲಿ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿದರು.

ಚಾತುರ್ಮಾಸ್ಯದ ನಿಮಿತ್ತ ನಗರದ ರಾಣಿಪೇಟೆಯ ರಾಘವೇಂದ್ರ ಮಠದಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ವಾಮೀಜಿ, ನಂತರ ಭಕ್ತರಿಗೆ ತಪ್ತ ಮುದ್ರಾಧಾರಣೆ ನೆರವೇರಿಸಿದರು.

ಬಳಿಕ ಮಾತನಾಡಿದ ಸ್ವಾಮೀಜಿ, ‘ಚಾತುರ್ಮಾಸ್ಯ ವ್ರತದಲ್ಲಿ ರಾಯರಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿಯಾಗಲೆಂದು ಪ್ರಾರ್ಥಿಸಲಾಗುವುದು. ಮಂತ್ರಾಲಯದ ಸುಜಿಯೀಂದ್ರ ತೀರ್ಥ ಸ್ವಾಮೀಜಿಗಳ ಆರಾಧನೆ ಸ್ಮರಣಾರ್ಥ ಒಂದು ವರ್ಷ ಹೊಸಪೇಟೆ, ಬಳ್ಳಾರಿ, ಮಾನ್ವಿ, ಮಂತ್ರಾಲಯ, ಹೈದರಾಬಾದ್‌, ಚೆನ್ನೈ ಸೇರಿದಂತೆ ಇತರೆ ಕಡೆಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದರು.

‘ಚಾತುರ್ಮಾಸ್ಯದ ನಂತರ ಮೂರು ದಿನ ನಗರದಲ್ಲಿ ವಾಸ್ತವ್ಯ ಹೂಡಿ ಸಂಸ್ಥಾನ ಪೂಜೆ, ಭಕ್ತರ ಮನೆಗಳಿಗೆ ಭೇಟಿ ನೀಡಲಾಗುವುದು’ ಎಂದು ಹೇಳಿದರು.

ಶ್ರೀಮಠದ ಮೋಹನ್‌, ಗುರುರಾಜ್‌, ವಾದಿರಾಜಾಚಾರ್ಯ, ನರಸಿಂಹಮೂರ್ತಿ, ಗುರುರಾಜ್‌ ದೇಶಪಾಂಡೆ, ಆಲೂರು ಮುರಳಿ, ತಿರುಮಲೇಶ್‌ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !