ಮಂಗಳವಾರ, ಮೇ 18, 2021
28 °C

ಸಂತ್ರಸ್ತರಿಗೆ ಪರಿಹಾರ ನೀಡಲು ಕೇರಳಕ್ಕೆ ವೈದ್ಯಕೀಯ ವಿದ್ಯಾರ್ಥಿಗಳು ಪ್ರಯಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಳ್ಳಾರಿ: ಕೇರಳ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಮೆಡಿಕಲ್ ಸರ್ವಿಸ್ ಸೆಂಟರ್ ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಎಸ್‌ಯುಸಿಐಸಿ ಸ್ವಯಂ ಸೇವಕರು ನಗರದ ರೈಲು ನಿಲ್ದಾಣದಿಂದ ಶನಿವಾರ ಪ್ರಯಾಣ ಆರಂಭಿಸಿದರು. ಜನರಿಂದ ಸಂಗ್ರಹಿಸಿದ ಔಷಧಿ, ಬಟ್ಟೆ, ಧವಸ–ಧಾನ್ಯಗಳನ್ನು ಜೊತೆಗೆ ಕೊಂಡೊಯ್ದರು.

ರೈಲು ನಿಲ್ದಾಣದ ಬಳಿ ನಡೆದ ಸಭೆಯಲ್ಲಿ ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ.ನಿಜಾಮುದ್ದೀನ್, ವೈದ್ಯಕೀಯ ತಂಡಕ್ಕೆ ಪರಿಹಾರ ಸಾಮಗ್ರಿಗಳನ್ನು ಸಾಂಕೇತಿಕವಾಗಿ ನೀಡಿ ಶುಭ ಹಾರೈಸಿದರು.

ಎಸ್‌ಯುಸಿಐಸಿ ರಾಜ್ಯ ಸಮಿತಿ ಸದಸ್ಯ ಕೆ.ಸೋಮಶೇಖರ್. ಪಕ್ಷದ ಮಂಜುಳಾ, ದೇವದಾಸ್, ನಾಗಲಕ್ಷ್ಮಿ, ಡಾ.ಪ್ರಮೋದ್, ಸೋಮಶೇಖರ ಗೌಡ ಹಾಗೂ ಸೆಂಟರ್‌ ಜಿಲ್ಲಾ ಸಂಚಾಲಕಿ ಡಾ.ದಿವ್ಯಾ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು