ಚೆನ್ನೈನಲ್ಲಿ ಕಳ್ಳನ ಬಂಧಿಸಿದ ಪೊಲೀಸರು: ₹5 ಲಕ್ಷ ಮೊತ್ತದ ಚಿನ್ನಾಭರಣ ವಶ

7
ಇನ್ನೊಬ್ಬನಿಗೆ ಹುಡುಕಾಟ

ಚೆನ್ನೈನಲ್ಲಿ ಕಳ್ಳನ ಬಂಧಿಸಿದ ಪೊಲೀಸರು: ₹5 ಲಕ್ಷ ಮೊತ್ತದ ಚಿನ್ನಾಭರಣ ವಶ

Published:
Updated:
Deccan Herald

ಹೊಸಪೇಟೆ: ಮಹಿಳೆಯೊಬ್ಬರ ಗಮನ ಬೇರೆಡೆ ಸೆಳೆದು ನಗದು ಹಣ, ಆಭರಣ ದೋಚಿದ್ದ ತಮಿಳುನಾಡಿನ ಜಿ. ಜಯಶೀಲನ್‌ ಎಂಬಾತನನ್ನು ಬಂಧಿಸಿ, ಆತನಿಂದ ₹5 ಲಕ್ಷ ಮೊತ್ತದ ಚಿನ್ನಾಭರಣಗಳನ್ನು ಇಲ್ಲಿನ ಪಟ್ಟಣ ಠಾಣೆ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

‘ಬಂಧಿತ ಜಿ. ಜಯಶೀಲನ್‌ ತಮಿಳುನಾಡಿನ ತಿರುಚಿ ಜಿಲ್ಲೆಯ ರಾಮಜೀ ನಗರದವನು. ಈತನ ಕಿರಿಯ ಸಹೋದರ ಶರವಣನ ಪತ್ತೆ ಕಾರ್ಯ ಮುಂದುವರಿದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌ ಶನಿವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಬಾಗಲಕೋಟೆಯ ಮಹಾಲಿಂಗಪುರದ ನಾಗಾರ್ಜುನ ಹಾಗೂ ಅವರ ತಾಯಿ ಕಲ್ಯಾಣಿ ಮಾ. 22ರಂದು ಆಂಧ್ರದಲ್ಲಿ ಮದುವೆ ಮುಗಿಸಿಕೊಂಡು ರಾತ್ರಿ ನಗರದಲ್ಲಿ ತಂಗಿದ್ದರು. ಮರುದಿನ ಬೆಳಿಗ್ಗೆ ಮಹಾಲಿಂಗಪುರಕ್ಕೆ ತೆರಳುವಾಗ, ನಗರದ ಬಸ್‌ ನಿಲ್ದಾಣದ ಸಮೀಪ ಕಾರು ನಿಲ್ಲಿಸಿ, ನಾಗಾರ್ಜುನ ಹಣ್ಣು ತರಲು ಕೆಳಗಿಳಿದು ಹೋಗಿದ್ದಾರೆ. ಈ ವೇಳೆ ಜಯಶೀಲನ್‌ ಹಾಗೂ ಶರವಣ ಕಾರಿನ ಬಳಿ ಹೋಗಿ, ಕಲ್ಯಾಣಿ ಅವರ ಗಮನ ಬೇರೆಡೆ ಸೆಳೆದು, ₹8.75 ಲಕ್ಷ ಮೊತ್ತದ ಚಿನ್ನಾಭರಣ ಹಾಗೂ ನಗದು ಹಣವಿರುವ ಬ್ಯಾಗ್‌ ದೋಚಿಕೊಂಡು ಹೋಗಿದ್ದಾರೆ. ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ವಿವರಿಸಿದರು.

‘ನಗರದ ಬಸ್‌ ನಿಲ್ದಾಣ ಬಳಿಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲಿಸಿದ ಪಟ್ಟಣ ಠಾಣೆ ಪೊಲೀಸರು, ಚೆನ್ನೈಗೆ ತೆರಳಿ ಜಯಶೀಲನ್‌ನನ್ನು ಬಂಧಿಸಿದ್ದಾರೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌. ಜಗದೀಶ್‌, ಡಿ.ವೈ.ಎಸ್‌.ಪಿ. ಶಿವಾರೆಡ್ಡಿ ಕೆ., ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಲಿಂಗನಗೌಡ ನೆಗಳೂರು, ಸಾಬಯ್ಯ, ಎ. ಗಡಗಡೆ, ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !