ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾಣು ಇಂಧನ, ಭದ್ರತೆ ಸೇರಿದಂತೆ 14 ಒಪ್ಪಂದಗಳಿಗೆ ಭಾರತ–ಫ್ರಾನ್ಸ್ ಸಹಿ

Last Updated 10 ಮಾರ್ಚ್ 2018, 12:52 IST
ಅಕ್ಷರ ಗಾತ್ರ

ನವದೆಹಲಿ: ಪರಮಾಣು ಇಂಧನ, ಭದ್ರತೆ ಸೇರಿದಂತೆ 14 ಒಪ್ಪಂದಗಳಿಗೆ ಭಾರತ ಮತ್ತು ಫ್ರಾನ್ಸ್‌ ಸಹಿ ಹಾಕಿವೆ.

ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ‘ಹೈದರಾಬಾದ್ ಹೌಸ್‌’ನಲ್ಲಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ನಂತರ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಶಿಕ್ಷಣ, ನಗರಾಭಿವೃದ್ಧಿ, ಪರಿಸರ, ರೈಲ್ವೆ, ಸಶಸ್ತ್ರ ಪಡೆಗಳ ನಡುವಣ ಸಹಕಾರಕ್ಕೆ ಸಂಬಂಧಿಸಿ ಸಹ ಒಪ್ಪಂದ ರೂಪಿಸಲಾಗಿದೆ. ನಂತರ ಉಭಯ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

‘ರಕ್ಷಣಾ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ಸಹಕಾರ ದೃಢಗೊಳ್ಳಲಿದ್ದು, ಸೌರಶಕ್ತಿ, ತಂತ್ರಜ್ಞಾನ, ಬಾಹ್ಯಾಕಾಶ ಕ್ಷೇತ್ರಗಳ ಸಹಕಾರವೂ ಉತ್ತಮಗೊಳ್ಳಲಿದೆ’ ಎಂದು ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಪ್ರಧಾನಿ ಮೋದಿ ಹೇಳಿದರು.

‘ಎರಡೂ ರಾಷ್ಟ್ರಗಳ ನಡುವಣ ರಕ್ಷಣಾ ಸಹಕಾರಕ್ಕೆ ಈಗ ಹೊಸ ಪ್ರಾಮುಖ್ಯತೆ ಬಂದಿದೆ. ಭಯೋತ್ಪಾದನೆ ಮತ್ತು ಜನಾಂಗೀಯ ದಾಳಿಯಂಥ ಬೆದರಿಕೆಗಳನ್ನು ಹತ್ತಿಕ್ಕಲು ಉಭಯ ರಾಷ್ಟ್ರಗಳು ಒಂದಾಗಿ ಕೆಲಸ ಮಾಡಲಿವೆ’ ಎಂದು ಮ್ಯಾಕ್ರಾನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT