ಮಂಗಳವಾರ, ನವೆಂಬರ್ 19, 2019
25 °C

ಅತ್ಯಾಚಾರಕ್ಕೆ ಯತ್ನ; 3 ವರ್ಷ ಜೈಲು

Published:
Updated:

ಹೊಸಪೇಟೆ: ಮಹಿಳೆ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿನೋದ್‌ ಎಂಬಾತನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಶಿವನಗೌಡ್ರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಕಲಂ 457, 448, 354(ಬಿ) ಅಡಿ ಮೂರು ವರ್ಷ ಜೈಲು ವಾಸ, ₹4,000 ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ಆಗದಿದ್ದಲ್ಲಿ ಜೈಲಿನಲ್ಲಿ ಇಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

2015ರ ನವೆಂಬರ್‌ 20ರಂದು ಕಂಪ್ಲಿಯಲ್ಲಿ ರಾತ್ರಿ 11 ಗಂಟೆಗೆ ವಿನೋದ್‌, ಮಹಿಳೆಯೊಬ್ಬರ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಕುರಿತು ಮಹಿಳೆ ಠಾಣೆಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡು, ಪಿ.ಎಸ್‌.ಐ. ನಾಗರಾಜ ಮೇಕ, ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾಗಿ ಬಿ. ವಿಜಯಚಂದ್ರ ಪ್ರಭು ವಾದ ಮಂಡಿಸಿದ್ದರು. 

ಪ್ರತಿಕ್ರಿಯಿಸಿ (+)