ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಮಿನಿ ವಿಧಾನಸೌಧಕ್ಕೆ ಅಡಿಗಲ್ಲು

ಶತಮಾನ ಪೂರೈಸಿದ ತಾಲ್ಲೂಕು ಕಚೇರಿ ಕಟ್ಟಡ ಜಾಗದಲ್ಲೇ ನಿರ್ಮಾಣ
Last Updated 4 ಆಗಸ್ಟ್ 2019, 13:05 IST
ಅಕ್ಷರ ಗಾತ್ರ

ಕೂಡ್ಲಿಗಿ: ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಿಸಬೇಕೆನ್ನುವ ಜನರ ಬಹುದಿನಗಳ ಬೇಡಿಕೆ ಈಡೇರುವ ಸಮಯ ಕೂಡಿ ಬಂದಿದ್ದು, ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರು ಸೋಮವಾರ (ಆ.5) ಅಡಿಗಲ್ಲು ಹಾಕುವರು.

1.80 ಎಕರೆ ವಿಸ್ತೀರ್ಣದಲ್ಲಿ ₹10 ಕೋಟಿಯಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನ ಸೌಧ ಮೂರು ಮಹಡಿಗಳನ್ನು ಹೊಂದಿರಲಿದೆ. ಮೊದಲ ಹಂತದಲ್ಲಿ ಒಟ್ಟು 3,312 ಚ.ಮೀ. ಕಟ್ಟಡ ನಿರ್ಮಾಣವಾಗಲಿದೆ. 1,358 ಚ.ಮೀ. ನೆಲ ಅಂತಸ್ತು, 977 ಚ.ಮೀ. ವಿಸ್ತೀರ್ಣದಲ್ಲಿ ಮೊದಲ ಹಾಗೂ ಎರಡನೇ ಮಹಡಿಗಳು ನಿರ್ಮಾಣವಾಗಲಿವೆ.

ನೆಲ ಅಂತಸ್ತಿನಲ್ಲಿ ತಹಶೀಲ್ದಾರ್ ಕಚೇರಿ, ಉಪ ನೋಂದಣಿ ಕಚೇರಿ, ಉಪ ಖಜಾನೆ, ಚುನಾವಣಾ ವಿಭಾಗ, ಕಿಯೊಸ್ಕೊ ಕಚೇರಿಗಳು ಇರಲಿವೆ. ಮೊದಲ ಮಹಡಿಯಲ್ಲಿ ಶಾಸಕರ ಕಚೇರಿ, ಸಭಾಂಗಣ, ಭೂಮಾಪನ ಶಾಖೆ ಹಾಗೂ ಎರಡನೇ ಮಹಡಿಯಲ್ಲಿ ಅಬಕಾರಿ ಮತ್ತು ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆಯ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಎಲ್ಲ ವಿಭಾಗಗಳಲ್ಲಿಯೂ ಸಿ.ಸಿ.ಟಿ.ವಿ. ಕ್ಯಾಮೆರಾ, ಲ್ಯಾನ್, ಸೌರ ವಿದ್ಯುತ್ ವ್ಯವಸ್ಥೆ, ಮಹಿಳೆಯರು, ಪುರುಷರು ಮತ್ತು ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗುವುದು.

ಜನ ಸಂಪರ್ಕ ಹೊಂದಿರುವ ಇಲಾಖೆಗಳು ಒಂದೇ ಸೂರಿನಡಿಯಲ್ಲಿ ಬರಲಿದ್ದು, ಮಿನಿ ವಿಧಾನ ಸೌಧದ ಎದುರಿಗೆ ಕೋರ್ಟ್ ಹಾಗೂ ಪಕ್ಕದಲ್ಲಿಯೇ ಬಸ್ ನಿಲ್ದಾಣವಿದೆ. ಇದರಿಂದ ತಾಲ್ಲೂಕಿನ ವಿವಿಧ ಭಾಗಗಳಿಂದ ಬರುವ ಜನರಿಗೆ ಅನುಕೂಲವಾಗಲಿದೆ.

ಈಗಿರುವ ತಾಲ್ಲೂಕು ಕಚೇರಿ ಕಟ್ಟಡವನ್ನು 1908ರಲ್ಲಿ ನಿರ್ಮಾಣ ಮಾಡಲಾಗಿದ್ದು, 1891ರಲ್ಲಿ ತಾಲ್ಲೂಕು ಕಚೇರಿ ನಿರ್ಮಾಣ ಮಾಡಲು ಅಂದಿನ ಜಿಲ್ಲಾಡಳಿತ ಭೂಮಿಯನ್ನು ವಶಪಡಿಸಿಕೊಂಡಿತ್ತು. 724.18 ಚ.ಮೀ. ಜಾಗದಲ್ಲಿ ಬ್ರಿಟೀಷ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಅದಕ್ಕಾಗಿ ₹23 ಲಕ್ಷ ವೆಚ್ಚ ಮಾಡಲಾಗಿತ್ತು.

‘ಚುನಾವಣೆ ವೇಳೆ ಕೊಟ್ಟಿರುವ ಭರವಸೆಯಮತೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ’ ಎಂದು ಶಾಸಕ ಗೋಪಾಲಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT