ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಸಂಸ್ಥೆಯಿಂದ ಮೂವರಿಗೆ ಪರಿಹಾರ

Last Updated 8 ಸೆಪ್ಟೆಂಬರ್ 2020, 15:57 IST
ಅಕ್ಷರ ಗಾತ್ರ

ಹೊಸಪೇಟೆ: ಅನಾರೋಗ್ಯದಿಂದ ಇತ್ತೀಚೆಗೆ ಮೃತಪಟ್ಟ ನಿರ್ವಾಹಕ ಐ. ಬಾಲನಂದ ಅವರ ತಂದೆ ಐ. ದೊಡ್ಡವೀರಪ್ಪ ಅವರಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಅವರು ಮಂಗಳವಾರ ₹3 ಲಕ್ಷ ಪರಿಹಾರದ ಚೆಕ್‌ ವಿತರಿಸಿದರು.

ಬಾಲನಂದ ಅವರು ಸಂಡೂರು ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೃತರ ಅವಲಂಬಿತರಿಗೆ ಆಂತರಿಕ ಗುಂಪು ವಿಮೆ ಯೋಜನೆಯಡಿ ಪರಿಹಾರ ನೀಡಲಾಗಿದೆ.

ಅಪಘಾತದಲ್ಲಿ ಸಾವು; ಪರಿಹಾರ

ಎರಡು ಪ್ರತ್ಯೇಕ ಅಪಘಾತಗಳಲ್ಲಿ ಸಾರಿಗೆ ಸಂಸ್ಥೆಯ ಬಸ್‌ ಡಿಕ್ಕಿ ಹೊಡೆದಿದ್ದರಿಂದ ಸಾವನ್ನಪ್ಪಿದ ಮೃತರ ಕುಟುಂಬದವರಿಗೆ ತಲಾ ₹35,000 ಪರಿಹಾರದ ಚೆಕ್‌ ವಿತರಿಸಲಾಗಿದೆ.

ನಗರದ ಮಲ್ಲಿಗೆ ಹೋಟೆಲ್‌ ಬಳಿ 2018ರ ನ. 14ರಂದು ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನದ ಹಿಂಬದಿ ಸವಾರ ಗೌಸ್‌ ಎಂಬುವರು ಮೃತಪಟ್ಟಿದ್ದರು. ಅವರ ತಂದೆ ಮಾಬು ಸಾಬ್‌ ಹಾಗೂ 2019ರ ಡಿ. 25ರಂದು ಹರಪನಹಳ್ಳಿ ಬಸ್‌ ನಿಲ್ದಾಣದ ಹೊರಗೆ ನಡೆದ ಅಪಘಾತದಲ್ಲಿ ಪಾದಚಾರಿ ಸಿದ್ದೇಶ್‌ ಎನ್ನುವವರು ಸಾವನ್ನಪ್ಪಿದ್ದರು. ಅವರ ತಂದೆ ಕೆ.ಎಂ. ಕೊಟ್ರಯ್ಯ ಅವರಿಗೆ ₹35,000 ಪರಿಹಾರದ ಚೆಕ್‌ ಅನ್ನು ಶೀನಯ್ಯ ವಿತರಿಸಿದರು.

ವಿಭಾಗೀಯ ಸಂಚಾರ ಅಧಿಕಾರಿ ಕೆ. ಬಸವರಾಜು, ಸಹಾಯಕ ಲೆಕ್ಕಾಧಿಕಾರಿ ಎಸ್‌. ಚಿತ್ತವಾಡ್ಗೆಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT