ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್‌: ಹುಬ್ಬಳ್ಳಿಯ ವೀಣಾಗೆ ಚಿನ್ನ ಡಬಲ್

Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಧಾರವಾಡ: ಹುಬ್ಬಳ್ಳಿಯ ವೀಣಾ ಅಡಗಿಮನಿ ಅವರು ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ ಕಾಲೇಜು ಅಥ್ಲೆಟಿಕ್‌ ಚಾಂಪಿ ಯನ್‌ಷಿಪ್‌ನಲ್ಲಿ ಶುಕ್ರವಾರ ಎರಡು ಕೂಟ ದಾಖಲೆಯೊಂದಿಗೆ  ಚಿನ್ನದ ಪದಕಗಳನ್ನು ಜಯಿಸಿದರು.

ಇಲ್ಲಿನ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಆರಂಭವಾದ ಕೂಟದಲ್ಲಿ ಗುರುಸಿದ್ಧಪ್ಪ ಕೋತಂಬರಿ (ಜಿ.ಕೆ.) ಕಾನೂನು ಕಾಲೇಜಿನ ವೀಣಾ  100 ಮೀಟರ್‌ ಓಟದ ಸ್ಪರ್ಧೆಯಲ್ಲಿ ಅವರು 13.24ಸೆ. (ಹಳೆಯ ದಾಖಲೆ: 2012ರಲ್ಲಿ ಮಂಗಳೂರಿನ ಎಸ್‌ಡಿಎಂ ಕಾಲೇಜಿನ ಶೀತಲ್‌ 14.00ಸೆ.) ಮತ್ತು 400 ಓಟದಲ್ಲಿ 1:06.09ಸೆ. (ಹಳೆಯ ದಾಖಲೆ: ಶೀತಲ್‌ 1:10.78ಸೆ.) ಗುರಿ ಮುಟ್ಟಿ ದಾಖಲೆ ಬರೆದರು.

ಗದುಗಿನ ಎಸ್‌.ಎ. ಮಾನ್ವಿ ಕಾಲೇಜಿನ ಬಿ.ಎಸ್. ಭಕ್ಷೀತ್‌  (400 ಮೀ. ಓಟ), ಇದೇ ಕಾಲೇಜಿನ ಶಂಕರಸಿಂಗ್‌ ಬಿಸ್ಟ್‌ (ಲಾಂಗ್‌ಜಂಪ್‌), ಕೋತಂಬರಿ ಕಾಲೇಜಿನ ತ್ರಿವೇಣಿ ಚುಟ್ಕೆ (1500 ಮೀ. ಓಟ), ಮೈಸೂರಿನ ಜೆಎಸ್‌ಎಸ್‌ ಕಾಲೇಜಿನ ಯೋಗಿತಾ ಬಿ. ರಾಜ್‌ (ಲಾಂಗ್‌ಜಂಪ್‌) ಮತ್ತು ಮಂಗಳೂರಿನ ಎಸ್‌ಡಿಎಂ ಕಾಲೇಜಿನ ವಿ.ವಿ. ರವೀನಾ (ಹೈಜಂಪ್‌ನಲ್ಲಿ) ಮೊದಲ ದಿನ ಕೂಟ ದಾಖಲೆ ಮಾಡಿದರು.

ಫಲಿತಾಂಶಗಳು:  ಪುರುಷರು:  100 ಮೀ.: ಇಮಾನ್ಯುಯೆಲ್‌ (ಬಿಎಂಎಸ್‌ ಕಾಲೇಜು, ಬೆಂಗಳೂರು, ಕಾಲ: 11ಸೆ.)–1, ಶಂಕರಸಿಂಗ್‌ ಬಿಸ್ಟ್‌ (ಎಸ್‌.ಎ. ಮಾನ್ವಿ ಕಾಲೇಜು, ಗದಗ)–2, ಕೆ. ಕಿರಣ (ಶ್ರೀಬಾಲಾಜಿ ಕಾಲೇಜು, ಬೆಂಗಳೂರು)–3. 400 ಮೀ.: ಭಕ್ಷೀತ್‌ ಬಿ.ಎಸ್‌. (ಎಸ್‌.ಎ. ಮಾನ್ವಿ ಕಾಲೇಜು, ಗದಗ; 51.66ಸೆ.)–1, ಎಂ. ಶಿವಪ್ರಸಾದ (ಬಿ.ವಿ. ಬೆಲ್ಲದ ಕಾಲೇಜು, ಬೆಳಗಾವಿ)–2, ಗಣೇಶ ಜಿ. ನಾಯ್ಕ (ಜೆ.ಆರ್‌. ಕಾಲೇಜು, ಬೆಂಗಳೂರು)–3.

1500 ಮೀ.: ಲಕ್ಷ್ಮಣ್ ಲಮಾಣಿ (ಜಿ.ಕೆ. ಕಾಲೇಜು, ಹುಬ್ಬಳ್ಳಿ; 4ನಿ, 29.30ಸೆ.)–1, ಮಹೇಶ ಡಿ. ಶಿಂಗಡೆ (ಕೆಎಲ್‌ಇ ಸೊಸೈಟಿ ಕಾಲೇಜು, ಚಿಕ್ಕೋಡಿ)–2, ಎಂ. ವಿಷ್ಣು (ಬಿಇಎಸ್‌ ಕಾಲೇಜು, ಬೆಂಗಳೂರು)–3.

ಶಾಟ್‌ಪಟ್‌: ಪ್ರಜ್ವಲ್‌ ಎಸ್‌. ಶೆಟ್ಟಿ (ವೈಕುಂಠ ಬಾಳಿಗ ಕಾಲೇಜು, ಕುಂಜಿಬೆಟ್ಟು, ಉಡುಪಿ; 10.38ಮೀ.)–1, ಜಾಬಿ ಜಾಯ್‌ (ವಿವೇಕಾನಂದ ಕಾಲೇಜು, ಪುತ್ತೂರು)–2, ಜಿ.ಕೆ. ಸಂಜಯ್ (ಸರ್ಕಾರಿ ಕಾನೂನು ಕಾಲೇಜು, ಹಾಸನ)–3.

ಡಿಸ್ಕಸ್‌ ಎಸೆತ: ಜಾಬಿ ಜಾಯ್‌ (ವಿವೇಕಾನಂದ ಕಾಲೇಜು, ಪುತ್ತೂರು; 29.37ಮೀ.)–1, ಎ. ಸುನೀಲ್‌ (ವಿಶ್ವೇಶ್ವರಪುರ ಕಾಲೇಜು, ಬೆಂಗಳೂರು)–2, ಜೆರ್ಷೋಮ್‌ ಮಾರ್ಕ್‌ (ಆರ್‌.ಎಲ್‌. ಕಾಲೇಜು, ದಾವಣಗೆರೆ)–3.

ಲಾಂಗ್‌ಜಂಪ್‌: ಶಂಕರಸಿಂಗ್‌ ಬಿಸ್ಟ್‌ (ಎಸ್‌.ಎ. ಮಾನ್ವಿ ಕಾಲೇಜು, ಗದಗ; 6.56 ಮೀ.)–1, ಅರುಣ ಸವಣೂರ (ಜಿ.ಕೆ. ಕಾಲೇಜು, ಹುಬ್ಬಳ್ಳಿ)–2, ಅಶೋಕ ಹೆಗ್ಡೆ (ಎಸ್‌ಡಿಎಂ ಕಾಲೇಜು, ಮಂಗಳೂರು)–3.

ಹೈಜಂಪ್‌: ಎಂ.ಬಿ. ಪೊನ್ನಣ್ಣ (ಜೆಎಸ್‌ಎಸ್‌ ಕಾಲೇಜು, ಮೈಸೂರು; 1.61 ಮೀ.)–1, ಎನ್‌.ಕೆ. ಮಲ್ಲಿಕಾರ್ಜುನ (ಕೆಎಸ್‌ಎಲ್‌ಯು ಕಾನೂನು ಶಾಲೆ, ನವನಗರ)–2, ರಾಘವ ಬಿದ್ದಪ್ಪ (ಕೆಎಲ್‌ಇ ಸೊಸೈಟಿ ಕಾಲೇಜು, ಬೆಂಗಳೂರು )–3.

4X100 ಮೀ. ರಿಲೆ: ಎಸ್‌.ಎ. ಮಾನ್ವಿ ಕಾಲೇಜು ಗದಗ (47.93ಸೆ.)–1, ಶೇಷಾದ್ರಿಪುರಂ ಕಾಲೇಜು, ಬೆಂಗಳೂರು –2, ಬಿ.ಎಂ.ಎಸ್‌. ಕಾಲೇಜು, ಬೆಂಗಳೂರು–3.

ಮಹಿಳೆಯರ ವಿಭಾಗ: 100ಮೀ: ವೀಣಾ ಅಡಗಿಮನಿ (ಜಿ.ಕೆ. ಕಾಲೇಜು, ಹುಬ್ಬಳ್ಳಿ; 13.24 ಸೆ.)–1, ಸುಷ್ಮಿತಾ ಆರ್‌. (ಜೆಎಸ್‌ಎಸ್‌ ಕಾಲೇಜು, ಮೈಸೂರು)–2, ಅಪೂರ್ವ ಮರಾಠೆ (ಆರ್‌.ಎಲ್‌. ಕಾಲೇಜು, ಬೆಳಗಾವಿ)–3.

400ಮೀ: ವೀಣಾ ಅಡಗಿಮನಿ (ಜಿ.ಕೆ. ಕಾಲೇಜು, ಹುಬ್ಬಳ್ಳಿ; 1ನಿ:06.09ಸೆ)–1, ಯೋಗಿತಾ ಬಿ. ರಾಜ್‌ (ಜೆಎಸ್‌ಎಸ್‌ ಕಾಲೇಜು, ಮೈಸೂರು)–2, ಕೆ.ಎಸ್‌. ಸಂಧ್ಯಾ (ವಿವೇಕಾನಂದ ಕಾಲೇಜು, ಪುತ್ತೂರು)–3.

1500ಮೀ. ಓಟ: ತ್ರಿವೇಣಿ ಚುಟ್ಕೆ (ಜಿ.ಕೆ. ಕಾಲೇಜು, ಹುಬ್ಬಳ್ಳಿ; 6ನಿ.16:72ಸೆ.)–1, ಭೀಮಮ್ಮ ಹಡಗಲಿ (ಎಚ್‌ಸಿಇಎಸ್‌ ಬಿಬಿಎ ಎಲ್‌ಎಲ್‌ಬಿ ಕಾಲೇಜು, ಗದಗ)–2, ಅಲ್ಫಾ ಗೋನಾ (ಜಿ.ಕೆ. ಕಾಲೇಜು, ಹುಬ್ಬಳ್ಳಿ)–3.

ಶಾಟ್‌ಪಟ್‌: ರುವಿಟಾ ಮೆಲಿಟಾ ಡಿಸೋಜಾ (ಕುಂಜಿಬೆಟ್ಟು, ಉಡುಪಿ; 8.19ಮೀ.)–1, ಜ್ಯೋತಿ ಪನ್ಸೆ (ಜಿ.ಕೆ. ಕಾಲೇಜು, ಹುಬ್ಬಳ್ಳಿ)–2, ಎಂ. ಮುನಿಪ್ರಿಯಾ (ಬಿಷಪ್‌ ಕಾಟನ್‌ ಮಹಿಳಾ ಕ್ರಿಶ್ಚಿಯನ್‌ ಕಾಲೇಜು, ಬೆಂಗಳೂರು)–3.

ಡಿಸ್ಕಸ್‌ ಎಸೆತ: ಸಿ. ಐಶ್ವಾ (ಕೆಎಸ್‌ಎಲ್‌ಯು ಕಾಲೇಜು, ನವನಗರ; 21.60ಮೀ.)–1, ಕೆ. ಜಾಗೃತಿ (ಎಸ್‌ಡಿಎಂ ಕಾಲೇಜು, ಮಂಗಳೂರು)–2, ಜ್ಯೋತಿ ಪನ್ಸೆ (ಜಿ.ಕೆ. ಕಾಲೇಜು, ಹುಬ್ಬಳ್ಳಿ)–3.

ಲಾಂಗ್‌ಜಂಪ್‌: ಯೋಗಿತಾ ಬಿ. ರಾಜ್‌ (ಜೆಎಸ್‌ಎಸ್‌ ಕಾಲೇಜು, ಮೈಸೂರು; 7.37ಮೀ.)–1, ವಿ.ವಿ. ರವೀನಾ (ಎಸ್‌ಡಿಎಂ ಕಾಲೇಜು, ಮಂಗಳೂರು)–2, ಆರ್‌. ಸುಷ್ಮಿತ್ರಾ (ಜೆಎಸ್‌ಎಸ್‌ ಕಾಲೇಜು, ಮೈಸೂರು)–3.

ಹೈಜಂಪ್‌: ವಿ.ವಿ. ರವೀನಾ (ಎಸ್‌ಡಿಎಂ ಕಾಲೇಜು, ಮಂಗಳೂರು; 1.26ಮೀ)–1, ಪಿ. ಅನಘಾ ಭಾಸ್ಕರನ್‌ (ಕೆವಿಜಿ ಕಾಲೇಜು, ಸುಳ್ಳ)–2, ಸುಪ್ರೀತಾ (ಬಿಇಎಸ್‌ ಕಾಲೇಜು, ಬೆಂಗಳೂರು)–3.

4X100 ಮೀ. ರಿಲೆ: ಜೆಎಸ್‌ಎಸ್‌ ಕಾಲೇಜು, ಮೈಸೂರು (1:03.91ಸೆ.)–1, ವಿವೇಕಾನಂದ ಕಾಲೇಜು, ಪುತ್ತೂರು –2, ಎಸ್‌ಡಿಎಂ ಕಾಲೇಜು, ಮಂಗಳೂರು–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT