ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಜಲಾಶಯ: ಒಳಹರಿವು ಇನ್ನಷ್ಟು ಇಳಿಮುಖ

Last Updated 11 ಮೇ 2021, 9:58 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಸತತ ಎರಡನೇ ದಿನವೂ ಇಳಿಕೆ ಕಂಡಿದೆ.

1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1,582.45 ಅಡಿ ನೀರಿನ ಸಂಗ್ರಹವಿದೆ. ಮಂಗಳವಾರ 2,528 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಸೋಮವಾರ 4,738 ಕ್ಯುಸೆಕ್‌, ಭಾನುವಾರ 6,580 ಒಳಹರಿವು ದಾಖಲಾಗಿತ್ತು.

ಜಲಾನಯನ ಪ್ರದೇಶದಲ್ಲಿ ಎರಡು ದಿನಗಳಿಂದ ಮಳೆ ತಗ್ಗಿರುವುದರಿಂದ ಸಹಜವಾಗಿಯೇ ಒಳಹರಿವು ಕಡಿಮೆಯಾಗಿದೆ. ಆದರೆ, ಮುಂಗಾರಿಗೂ ಮುನ್ನವೇ ಸತತವಾಗಿ ಅಣೆಕಟ್ಟೆಗೆ ನೀರು ಹರಿದು ಬರುತ್ತಿರುವುದರಿಂದ ರೈತ ಸಮುದಾಯ ಸಂತಸಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT