ಶುಕ್ರವಾರ, ನವೆಂಬರ್ 22, 2019
23 °C

ತುಂಗಭದ್ರಾ ಜಲಾಶಯದ ಒಳಹರಿವು ಭಾರಿ ಕುಸಿತ

Published:
Updated:

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು, ಹೊರಹರಿವು ಶುಕ್ರವಾರ ಭಾರಿ ಪ್ರಮಾಣದಲ್ಲಿ ತಗ್ಗಿದೆ.

32,116 ಕ್ಯುಸೆಕ್‌ ಒಳಹರಿವು ದಾಖಲಾದರೆ, 32,200 ಕ್ಯುಸೆಕ್‌ ಹೊರಹರಿವು ಇದೆ. ಗುರುವಾರ 87,019 ಕ್ಯುಸೆಕ್‌ ಒಳಹರಿವು, 87,200 ಕ್ಯುಸೆಕ್‌ ಹೊರಹರಿವು ಇತ್ತು. ಒಂದೇ ದಿನದಲ್ಲಿ ನೀರಿನ ಹರಿವು ತಗ್ಗಿದೆ.

ತಾಲ್ಲೂಕಿನ ಹಂಪಿಯ ಚಕ್ರತೀರ್ಥ, ವಿರೂಪಾಕ್ಷೇಶ್ವರ ದೇಗುಲದ ಸ್ನಾನಘಟ್ಟ, ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ರಾಮ ಲಕ್ಷ್ಮಣ ದೇವಸ್ಥಾನದ ಬಳಿ ನೀರು ತಗ್ಗಿದೆ. ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದ್ದ ಸ್ಮಾರಕಗಳ ಬಹುತೇಕ ಭಾಗ ಈಗ ಗೋಚರಿಸುತ್ತಿದೆ.

‘ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದೆ. ಶಿವಮೊಗ್ಗದ ತುಂಗಾ, ಭದ್ರಾ ಅಣೆಕಟ್ಟೆಯಿಂದ ಹರಿದು ಬರುತ್ತಿದ್ದ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಹೀಗಾಗಿ ಒಳಹರಿವು ತಗ್ಗಿದೆ’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ತಿಳಿಸಿದೆ.

ಪ್ರತಿಕ್ರಿಯಿಸಿ (+)