ಗುರುವಾರ , ಡಿಸೆಂಬರ್ 5, 2019
20 °C

ಇಬ್ಬರ ನಾಮಪತ್ರ ತಿರಸ್ಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಸಲ್ಲಿಸಿದ್ದ ಒಟ್ಟು 18 ಜನರ ಪೈಕಿ ಇಬ್ಬರ ನಾಮಪತ್ರಗಳು ತಿರಸ್ಕೃತಗೊಂಡಿವೆ.

ಕಾಂಗ್ರೆಸ್‌ನ ಸುವರ್ಣಮ್ಮ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದ ಮಾಳಪ್ಪ ಪೂಜಾರಿ ಹೆಸರು ತಿರಸ್ಕರಿಸಲಾಗಿದೆ. ಇಬ್ಬರು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿರಲಿಲ್ಲ ಎಂದು ಚುನಾವಣಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ತಿಳಿಸಿದ್ದಾರೆ.

16 ನಾಮಪತ್ರಗಳು ಕ್ರಮಬದ್ಧವಾಗಿದ್ದು, ಅವರ ವಿವರ ಇಂತಿದೆ. ಬಿಜೆಪಿಯಿಂದ ಆನಂದ್‌ ಸಿಂಗ್‌, ಜೆ.ಡಿ.ಎಸ್‌.ನ ಎನ್‌.ಎಂ. ನಬಿ, ಕಾಂಗ್ರೆಸ್‌ನ ವೆಂಕಟರಾವ ಘೋರ್ಪಡೆ, ರಾಷ್ಟ್ರೀಯವಾದಿ ಕಾಂಗ್ರೆಸ್‌ನಿಂದ ಮಮತಾ, ಕರ್ನಾಟಕ ರಾಷ್ಟ್ರ ಸಮಿತಿಯ ಪ.ಯ. ಗಣೇಶ, ಉತ್ತಮ ಪ್ರಜಾಕೀಯ ಪಕ್ಷದ ಲಂಬಾಣಿ ಮಹೇಶ, ಕಾಂಗ್ರೆಸ್ಸಿನ ನಿಂಬಗಲ್‌ ರಾಮಕೃಷ್ಣ, ಪಕ್ಷೇತರರಾದ ಅಲಿ ಹೊನ್ನೂರ್‌, ಕೆ. ಉಮೇಶ್‌, ಕವಿರಾಜ ಅರಸ್‌, ಕಿಚಿಡಿ ಕೊಟ್ರೇಶ್‌, ಕಂಡಕ್ಟರ್‌ ಪಂಪಾಪತಿ, ಪರಶುರಾಮ ಕಲ್ಲಾಳ್‌, ಮಾರ್ಕಂಡಪ್ಪ, ಸಿ.ಎಂ. ಮಂಜುನಾಥ, ಎಚ್‌. ಶಬ್ಬೀರ್‌.

ಪ್ರತಿಕ್ರಿಯಿಸಿ (+)