ತುಂಗಭದ್ರಾ ಜಲಾಶಯಕ್ಕೆ 2 ದಿನದಲ್ಲಿ ಬಂತು 2 ಟಿಎಂಸಿ ನೀರು

ಮಂಗಳವಾರ, ಜೂಲೈ 16, 2019
24 °C

ತುಂಗಭದ್ರಾ ಜಲಾಶಯಕ್ಕೆ 2 ದಿನದಲ್ಲಿ ಬಂತು 2 ಟಿಎಂಸಿ ನೀರು

Published:
Updated:
Prajavani

ಹೊಸಪೇಟೆ: ಎರಡು ದಿನಗಳಲ್ಲಿ ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಎರಡು ಟಿ.ಎಂ.ಸಿಗೂ ಅಧಿಕ ನೀರು ಹರಿದು ಬಂದಿದೆ.

ಜು.8ರಂದು ಜಲಾಶಯದಲ್ಲಿ 1.79 ಟಿ.ಎಂ.ಸಿ. ಅಡಿಯಷ್ಟು ನೀರಿನ ಸಂಗ್ರಹವಿತ್ತು. ಜು. 9ಕ್ಕೆ ಅದು 3.06 ಟಿ.ಎಂ.ಸಿಗೆ ಏರಿಕೆಯಾಗಿತ್ತು. ಬುಧವಾರ (ಜು.10) 4.15 ಟಿ.ಎಂ.ಸಿಗೆ ಹೆಚ್ಚಾಗಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 46.16 ಟಿ.ಎಂ.ಸಿ ನೀರಿನ ಸಂಗ್ರಹ ಇತ್ತು.

ಮಂಗಳವಾರ 14,911 ಕ್ಯುಸೆಕ್‌ ಇದ್ದ ಒಳಹರಿವು ಬುಧವಾರ ಸ್ವಲ್ಪ ತಗ್ಗಿದೆ. ಸದ್ಯ 12,875 ಕ್ಯುಸೆಕ್‌ ಒಳಹರಿವು ಇದೆ. ದಿನೇ ದಿನೇ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿಸಿದೆ.

ಸಮರ್ಪಕವಾಗಿ ಮಳೆಯಾಗದ ಕಾರಣ ಮಳೆಯಾಶ್ರಿತ ರೈತರು ಚಿಂತೆಗೀಡಾಗಿದ್ದಾರೆ. ಈಗಲೂ ಅನೇಕ ಭಾಗಗಳಲ್ಲಿ ಬಿತ್ತನೆಯಾಗಿಲ್ಲ.

ಬರಹ ಇಷ್ಟವಾಯಿತೆ?

 • 24

  Happy
 • 5

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !