ಬಿಸಿಲಲ್ಲಿ ಬೆವರು ಹರಿಸಿದ ಉಗ್ರಪ್ಪ

ಬುಧವಾರ, ಏಪ್ರಿಲ್ 24, 2019
24 °C

ಬಿಸಿಲಲ್ಲಿ ಬೆವರು ಹರಿಸಿದ ಉಗ್ರಪ್ಪ

Published:
Updated:
Prajavani

ಹೊಸಪೇಟೆ: ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪನವರು ಶನಿವಾರ ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಸುಡುವ ಬಿಸಿಲು ಲೆಕ್ಕಿಸದೆ ಬಿರುಸಿನ ಪ್ರಚಾರ ಕೈಗೊಂಡರು.

ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ತಾಲ್ಲೂಕಿನ ಬೈಲುವದ್ದಿಗೇರಿ, ಪಾಪಿನಾಯಕನಹಳ್ಳಿ, ಧರ್ಮಸಾಗರ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ, ಕರಪತ್ರಗಳನ್ನು ಕೊಟ್ಟು ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರಿದರು.

ಸಂಜೆ ನಗರದ ತಳವಾರಕೇರಿ, ಚಿತ್ರಕೇರಿ, ಮ್ಯಾಸಕೇರಿ, ಬಾಣದಕೇರಿಯಲ್ಲಿ ಮತ ಯಾಚಿಸಿದರು. ‘ಕ್ಷೇತ್ರದ ಜನತೆ ಉಪಚುನಾವಣೆಯಲ್ಲಿ ದೊಡ್ಡ ಅಂತರದಿಂದ ಗೆಲ್ಲಿಸಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿಯೂ ಬೆಂಬಲಿಸಿ, ಸಂಸತ್ತಿಗೆ ಕಳುಹಿಸುತ್ತಾರೆ ಎಂಬ ಭರವಸೆ ಇದೆ’ ಎಂದು ತಿಳಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಟಿಂಕರ್‌ ರಫೀಕ್‌, ಅಮಾಜಿ ಹೇಮಣ್ಣ, ನಗರಸಭೆ ಅಧ್ಯಕ್ಷ ಗುಜ್ಜಲ್‌ ನಿಂಗಪ್ಪ, ಎ.ಪಿ.ಎಂ.ಸಿ. ಅಧ್ಯಕ್ಷ ಜಂಬಾನಹಳ್ಳಿ ಪರಶುರಾಮಪ್ಪ, ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಹಾಲಪ್ಪ, ಕವಿತಾ ಈಶ್ವರ ಸಿಂಗ್, ಗುಜ್ಜಲ್ ನಾಗರಾಜ, ಫಹೀಮ್ ಬಾಷಾ, ತಮ್ಮನೆಳೆಪ್ಪ, ಸೋಮಣ್ಣ, ಶೇಖರಪ್ಪ, ಲಕ್ಷ್ಮಣ್ಣ, ಅಯ್ಯಪ್ಪ, ಚಂದ್ರಪ್ಪ, ಬಸವರಾಜ, ಅಂಕ್ಲೇಶ್, ಗಂಗಾಧರ, ಮಧುರಚೆನ್ನ ಶಾಸ್ತ್ರಿ, ತಾರಿಹಳ್ಳಿ ವೆಂಕಟೇಶ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !