ಪ್ರವಾಸೋದ್ಯಮದಿಂದ ನಿರುದ್ಯೋಗ ನಿವಾರಣೆ: ಅಶ್ವಿನ್‌ ಕೋತಂಬ್ರಿ

7

ಪ್ರವಾಸೋದ್ಯಮದಿಂದ ನಿರುದ್ಯೋಗ ನಿವಾರಣೆ: ಅಶ್ವಿನ್‌ ಕೋತಂಬ್ರಿ

Published:
Updated:
Deccan Herald

ಹೊಸಪೇಟೆ: ತಾಲ್ಲೂಕು ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ ಗುರುವಾರ ನಗರದಲ್ಲಿ ಜರುಗಿತು.

ಸಂಘದ ಅಧ್ಯಕ್ಷ ಅಶ್ವಿನ್‌ ಕೋತಂಬ್ರಿ ಮಾತನಾಡಿ, ‘ವಾಣಿಜ್ಯ ಮತ್ತು ಕೈಗಾರಿಕೆಗಳ ಬೆಳವಣಿಗೆಗೆ ಸಂಬಂಧಿಸಿದಂತೆ ಸಂಘ ಶ್ರಮಿಸುತ್ತಿದೆ. ಅನೇಕ ವಿಷಯಗಳಲ್ಲಿ ಸರ್ಕಾರಕ್ಕೆ ಸಲಹೆ ಕೂಡ ನೀಡಿದೆ. ಪ್ರತಿ ವರ್ಷ ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಗರಿಷ್ಠ ಅಂಕ ಗಳಿಸಿದ ಹತ್ತು ಜನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ’ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ ಪ್ರವಾಸಿ ತಾಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಪ್ರವಾಸೋದ್ಯಮ ಬೆಳವಣಿಗೆಗೆ ಯಥೇಚ್ಛ ಅವಕಾಶಗಳಿವೆ. ಅದನ್ನು ಸದುಪಯೋಗ ಪಡಿಸಿಕೊಂಡರೆ ನೂರಾರು ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಬಹುದು’ ಎಂದರು.

ಖಜಾಂಚಿ ದೇವೇಂದ್ರ ಕುಮಾರ ಸೋನಿ, 2016–17, 2017–18ನೇ ಸಾಲಿನ ವರದಿ ಮಂಡಿಸಿದರು. ಸಂಘದ ಕಾರ್ಯದರ್ಶಿ ಸೈಯದ್‌ ನಾಜಿಮುದ್ದೀನ್‌, ಉಪಾಧ್ಯಕ್ಷರಾದ ಕಾಕುಬಾಳ ರಾಜೇಂದ್ರ, ಇಮಾಮ್‌ ನಿಯಾಜಿ, ಜಂಟಿ ಕಾರ್ಯದರ್ಶಿಗಳಾದ ಎಸ್‌. ಭರಮಣ್ಣ, ಚಂದ್ರಕಾಂತ ಕಾಮತ್‌ ಇದ್ದರು. ಉದ್ಯಮಿಗಳಾದ ಗೊಗ್ಗ ಚನ್ನಬಸವರಾಜ, ಎಚ್‌. ಶ್ರೀನಿವಾಸರಾವ್‌, ಉಮಾ ಮಹೇಶ್ವರ್‌ ರಾವ್‌, ಅಲೀಂ ಎಸ್‌. ಅಹಮ್ಮದ್‌, ಡಾ. ಗುರುನಂದಿನಿ ಅವರನ್ನು ಸನ್ಮಾನಿಸಲಾಯಿತು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !