ಸಂಭ್ರಮದ ಮೀರ್ ಆಲಂ ಉರುಸ್‌

7

ಸಂಭ್ರಮದ ಮೀರ್ ಆಲಂ ಉರುಸ್‌

Published:
Updated:
ಹೊಸಪೇಟೆಯಲ್ಲಿ ಹಜರತ್ ಮೀರ್ ಆಲಂ ನವಾಜ್‌ ದರ್ಗಾದಲ್ಲಿ ಸಂಭ್ರಮದಿಂದ ಉರುಸ್‌ ನಡೆಯಿತು

ಹೊಸಪೇಟೆ: ಬಳ್ಳಾರಿ ರಸ್ತೆಯ ಹಜರತ್‌ ಮೀರ್‌ ಆಲಂ ನವಾಜ್‌ ದರ್ಗಾದಲ್ಲಿ ಶನಿವಾರ ರಾತ್ರಿ 86ನೇ ಉರುಸ್‌ ಶ್ರದ್ಧಾ, ಭಕ್ತಿಯಿಂದ ನಡೆಯಿತು.

ಉರುಸ್‌ ಪ್ರಯುಕ್ತ ನಗರದ ಮುಖ್ಯ ಮಸೀದಿಯಿಂದ ಮೀರ್‌ ಆಲಂ ನವಾಜ್‌ ದರ್ಗಾದ ವರೆಗೆ ಗಂಧವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಬಳಿಕ ದರ್ಗಾದಲ್ಲಿ ರಾತ್ರಿಯಿಡಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಹಾರಾಷ್ಟ್ರದ ಅಕ್ಕಲಕೋಟೆ ತಂಡದವರು ಭಜನೆ ಮಾಡಿದರು.

ಅಂಜುಮನ್‌ ಕಮಿಟಿಯ ಮೊಹಮ್ಮದ್‌ ಇಮಾಮ್‌ ನಿಯಾಜಿ, ಕೆ.ಬಡಾವಲಿ, ಖಾದರ್‌, ಸೈಯದ್‌ ವಾಹೀದ್‌, ಮೊಹಮ್ಮದ್‌ ಗೌಸ್‌, ಮುಸ್ತಾಕ್‌, ಶೇಖ್‌ ಅಹಮ್ಮದ್‌, ಜಾಫರ್‌, ಕೆ.ಕೆ. ಮೈನುದ್ದೀನ್‌, ಯಾಸೀನ್‌, ನಾಸೀರ್‌ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !