ಶುಕ್ರವಾರ, ನವೆಂಬರ್ 22, 2019
22 °C

ಕಮಲಾಪುರದಲ್ಲಿ ವಾಸವಿ ಭವನ ಉದ್ಘಾಟನೆ

Published:
Updated:
Prajavani

ಹೊಸಪೇಟೆ: ತಾಲ್ಲೂಕಿನ ಕಮಲಾಪುರದಲ್ಲಿ ₹20 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಆರ್ಯವೈಶ್ಯ ಸಮುದಾಯದ ವಾಸವಿ ಭವನವನ್ನು ಅನರ್ಹ ಶಾಸಕ ಆನಂದ್‌ ಸಿಂಗ್‌ ಅವರ ತಂದೆ ಪೃಥ್ವಿರಾಜ್‌ ಸಿಂಗ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘₹20 ಲಕ್ಷ ವೆಚ್ಚದಲ್ಲಿ ಭವನದ ಕೆಳಭಾಗದ ಕಟ್ಟಡ ಪೂರ್ಣಗೊಂಡಿದೆ. ಈಗಾಗಲೇ ಶಾಸಕರ ಅನುದಾನದಡಿ ₹10 ಲಕ್ಷ ಘೋಷಣೆಯಾಗಿದ್ದು, ಅದರಿಂದ ಸಭಾಂಗಣ ನಿರ್ಮಿಸಿಕೊಡಲಾಗುವುದು’ ಎಂದು ಹೇಳಿದರು. 

ವಾಸವಿ ಯುವಜನ ಸಂಘದ ಗೌರವ ಅಧ್ಯಕ್ಷ ಜೂಟೂರು ಹರಿಣಶೆಟ್ಟಿ, ಆರ್ಯವೈಶ್ಯ ಸಂಘದ ಅಧ್ಯಕ್ಷ ಜೂಟೂರು ನಾಗೇಂದ್ರ ಶೆಟ್ಟಿ, ವಾಸವಿ ಯುವಜನ ಸಂಘ ಕಮಲಾಪುರ ಘಟಕದ ಅಧ್ಯಕ್ಷ ಆಮಿದಾಲ್‌ ಚಂದ್ರಪ್ಪ ಶೆಟ್ಟಿ, ಮುಖಂಡರಾದ ಬಳಗಾನೂರು ಪಾಂಡಪ್ಪ ಶೆಟ್ಟಿ, ಬಳಗಾನೂರು ಚಿದಂಬರ ಶೆಟ್ಟಿ, ಜೂಟೂರು ರಾಮಣ್ಣ ಶೆಟ್ಟಿ, ಬಳಗಾನೂರು ತಿಮ್ಮಪ್ಪ ಶೆಟ್ಟಿ, ಜೂಟೂರು ರಂಗಣ್ಣ ಶೆಟ್ಟಿ, ಗಂಟಿ ಪಾರ್ಥಸಾರತಿ ಶೆಟ್ಟಿ, ಬಳಗಾನೂರು ನಾರಾಯಣ ಶೆಟ್ಟಿ, ಆಮಿದಾಲ್ ಸತ್ಯನಾರಾಯಣ ಶೆಟ್ಟಿ ಇದ್ದರು.

ಬಳಿಕ ಅಂಜಲಿ ಭರತನಾಟ್ಯ ಕಲಾಕೇಂದ್ರದವರು ‘ಅವತರಿಸಿದಳು ವಾಸವಿ’ ನೃತ್ಯರೂಪಕ ಪ್ರಸ್ತುತಪಡಿಸಿದರು.

ಪ್ರತಿಕ್ರಿಯಿಸಿ (+)