ತರಕಾರಿಯಿಂದ ವಾಸವಿ ದೇವಿ ಅಲಂಕಾರ

7

ತರಕಾರಿಯಿಂದ ವಾಸವಿ ದೇವಿ ಅಲಂಕಾರ

Published:
Updated:
Deccan Herald

ಹೊಸಪೇಟೆ: ನವರಾತ್ರಿ ಉತ್ಸವದ ಪ್ರಯುಕ್ತ ಇಲ್ಲಿನ ಹಂಪಿ ರಸ್ತೆಯ ಶ್ರೀವಾಸವಿ ದೇವಸ್ಥಾನದಲ್ಲಿ ಗುರುವಾರ ವಾಸವಿ ದೇವಿಗೆ ತರಕಾರಿಗಳಿಂದ ಅಲಂಕಾರ ಮಾಡಲಾಗಿತ್ತು.

ಬುಧವಾರ 102 ಸೀರೆಗಳಿಂದ ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು. ವಾಸವಿ ಮೂಲ ವಿಗ್ರಹಕ್ಕೆ ನವರಾತ್ರಿ ಮುಗಿಯುವವರೆಗೆ ನಿತ್ಯ ವಿಶೇಷ ಅಭಿಷೇಕ, ಪೂಜೆ, ಆರತಿ ಹಾಗೂ ಅಲಂಕಾರ ಮಾಡಲಾಗುತ್ತದೆ.

ವಾಸವಿ ದೀಕ್ಷಾ ಸೇವಾ ಸಮಿತಿ ಹಾಗೂ ಆರ್ಯವೈಶ್ಯ ಸಂಘದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ಬಿ. ನರಸಿಂಹಮೂರ್ತಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !