ದಾಖಲೆ ವಶಕ್ಕೆ ಪಡೆದ ಶಿಕ್ಷಣ ಇಲಾಖೆ ಸಮಿತಿ

7
ವಿಜಯನಗರ ವಿವಿ ನೇಮಕಾತಿ ವಿವಾದ

ದಾಖಲೆ ವಶಕ್ಕೆ ಪಡೆದ ಶಿಕ್ಷಣ ಇಲಾಖೆ ಸಮಿತಿ

Published:
Updated:

ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದಿದ್ದ ಬೋಧಕರ ನೇಮಕಾತಿ ಸಮಿತಿಯ ಎಲ್ಲ ಕಡತಗಳನ್ನು, ಆಯ್ಕೆಯಾದವರ ಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆಯ ಸಮಿತಿಯ ಪ್ರಮುಖರು ನಗರದಲ್ಲಿ ಶುಕ್ರವಾರ ವಶಕ್ಕೆ ಪಡೆದರು.

ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ, ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ಅವರು ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೂ ಮಾಹಿತಿ ಸಂಗ್ರಹಿಸಿದರು.

ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌, ಕುಲಸಚಿವರಾದ ಪ್ರೊ.ತುಳಸಿಮಾಲಾ, ವಿಶ್ವವಿದ್ಯಾಲಯದ ಸಿಬ್ಬಂದಿ ನೇಮಕಾತಿ ಸಮಿತಿಯ ಸಂಚಾಲಕ ಪ್ರೊ.ಭೀಮನಗೌಡ, ಸದಸ್ಯರಾದ ಕೆ.ವಿ.ಪ್ರಸಾದ್‌ ಸಮಿತಿ ಪ್ರಮುಖರಿಗೆ ಮಾಹಿತಿ ನೀಡಿದರು.

ತಮ್ಮನ್ನು ನೇಮಕಾತಿ ಸಮಿತಿಯಿಂದ ಹೊರಗಿಟ್ಟು ನೇಮಕಾತಿ ನಡೆಸಲಾಗಿದೆ ಎಂದು ರಾಜ್ಯಪಾಲರಿಗೆ ಮೌಲ್ಯಮಾಪನ ಕುಲಸಚಿವ ಪ್ರೊ.ಹೊನ್ನು ಸಿದ್ಧಾರ್ಥ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು. ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಅಭ್ಯರ್ಥಿಗಳು ಗಳಿಸಿದ ಒಟ್ಟಾರೆ ಅಂಕಗಳ ಬದಲು, ಸಂದರ್ಶನದಲ್ಲಿ ಪಡೆದ ಅಂಕಗಳನ್ನಷ್ಟೇ ವಿಶ್ವವಿದ್ಯಾಲಯ ಆನ್‌ಲೈನ್‌ನಲ್ಲಿ ಪ್ರಕಟಿಸಿರುವುದು ಅನುಮಾನ ಮೂಡಿಸಿದೆ ಎಂದೂ ಕೆಲ ಅಭ್ಯರ್ಥಿಗಳು ಆರೋಪಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !