‘ಗುರು ತೋರಿದ ದಾರಿಯಲ್ಲಿ ನಡೆಯಿರಿ’

7

‘ಗುರು ತೋರಿದ ದಾರಿಯಲ್ಲಿ ನಡೆಯಿರಿ’

Published:
Updated:
Deccan Herald

ಬಳ್ಳಾರಿ: ಜೀವನದಲ್ಲಿ ಗುರು ತೋರಿದ ಮಾರ್ಗದಲ್ಲಿ ನಡೆದರೆ ಮಾತ್ರ ಗುರಿ ಸಾಧನೆ ದಾರಿ ಸುಲಭವಾಗುತ್ತದೆ ಎಂದು ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳ್ ಹೇಳಿದರು.

ತಾಲ್ಲೂಕಿನ ಚೆಳ್ಳಗುರ್ಕಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 2008ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಗೆಳೆಯರ ಬಳಗದ ಆಶ್ರಯದಲ್ಲಿ ಇಲ್ಲಿನ ಎರ್ರಿತಾತ ದೇವಸ್ಥಾನದ ಆವರಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಗುರು ವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡ, ಗುರುವನ್ನು ಗೌರವಿಸಿದರೆ ಮಾತ್ರ ವಿದ್ಯಾರ್ಥಿಗಳು ಏಳಿಗೆ ಸಾಧ್ಯ ಎಂದು ಹೇಳಿದರು.

2008ನೇ ಸಾಲಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಿವೃತ್ತ ಮುಖ್ಯಶಿಕ್ಷಕ ಪಂಪನಗೌಡ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಹನುಮಂತ, ಎಸ್‌.ಡಿ.ಎಂ.ಸಿ ಅಧ್ಯಕ್ಷ ಟಿ.ತಾಯಣ್ಣ ಇದ್ದರು.

ನಿವೃತ್ತ ಮುಖ್ಯಶಿಕ್ಷಕ ಶಿವರುದ್ರಯ್ಯ, ನಿವೃತ್ತ ಶಿಕ್ಷಕ ಮಹಾಂತೇಶ, ಮುಖ್ಯಶಿಕ್ಷಕಿ ಭಾಗ್ಯಲಕ್ಷ್ಮಿ, ಶಿಕ್ಷಕರಾದ ಜ್ಯೋತಿ, ಈರಣ್ಣ ಬಡಿಗೇರ, ಲಕ್ಷ್ಮೀ ತಮ್ಮನಗೌಡ, ಶೈಲಜಾ, ನಾಗೇಂದ್ರ, ಉಪನ್ಯಾಸಕಿ ಕೆ.ಸವಿತಾ, ಮಂಜುನಾಥ, ರುದ್ರಗೌಡ, ರಾಜಣ್ಣ, ಚನ್ನಬಸವನಗೌಡ, ವಿಲ್ಸನ್, ಮಹೇಶ್‍ ಅವರನ್ನು ಸನ್ಮಾನಿಸಲಾಯಿತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !