ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ನದಿಗೆ ನೀರು ಬಿಡುಗಡೆ: ನದಿ ಪಾತ್ರದ ಜನರಿಗೆ ಎಚ್ಚರಿಕೆ

Last Updated 18 ಮಾರ್ಚ್ 2021, 13:28 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಬೆಳೆಗಳ ಸಂರಕ್ಷಣೆಗಾಗಿ ತುಂಗಭದ್ರಾ ನದಿಗೆ ಭದ್ರಾ ಜಲಾಶಯದಿಂದ 1.6 ಟಿಎಂಸಿ ಅಡಿ ನೀರು ಹರಿಸಲಾಗುವ ಕಾರಣದಿಂದ ನದಿ ಪಾತ್ರದ ಜನರು ನೀರಿಗಿಳಿಯಬಾರದು ಎಂದು ಭದ್ರಾ ಜಲಾಶಯ ಮಂಡಳಿ ತಿಳಿಸಿದೆ‌.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಬೆಳೆಗಳ ಸಂರಕ್ಷಣೆಗಾಗಿ ಗುರುವಾರದಿಂದ (ಮಾ.18) ಏ.1ರ ವರೆಗೂ ಪ್ರತಿದಿನ 1,200 ಕ್ಯುಸೆಕ್ ನಂತೆ ಒಟ್ಟು 1.6 ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತದೆ.

ನದಿಪಾತ್ರದಲ್ಲಿ ಸಾರ್ವಜನಿಕರು ಓಡಾಡಬಾರದು. ದನ,ಕರು, ಕುರಿಗಳನ್ನು ಬಿಡಬಾರದು. ನದಿ ಪಾತ್ರದ ರೈತರು ಪಂ‌ಪ್‌ಸೆಟ್‌ಗಳಿಂದ ನೀರು ಎತ್ತದಂತೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT