‘ಸಂವಿಧಾನಕ್ಕೆ ಕೈ ಹಾಕಿದರೆ ಸುಮ್ಮನಿರಲ್ಲ’

ಮಂಗಳವಾರ, ಏಪ್ರಿಲ್ 23, 2019
33 °C

‘ಸಂವಿಧಾನಕ್ಕೆ ಕೈ ಹಾಕಿದರೆ ಸುಮ್ಮನಿರಲ್ಲ’

Published:
Updated:
Prajavani

ಹೊಸಪೇಟೆ: ಇಲ್ಲಿನ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಭಾನುವಾರ ಬಾಬಾ ಸಾಹೇಬರ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು.

ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘದ ಅಧ್ಯಕ್ಷ ಎಂ.ಸಿ. ವೀರಸ್ವಾಮಿ ಅವರು ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಬಳಿಕ ಮಾತನಾಡಿ, ‘ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನದ ಪ್ರಕಾರ ಈ ದೇಶ ನಡೆಯುತ್ತಿದೆ. ಆದರೆ, ಮನುವಾದಿಗಳು ಅದನ್ನು ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ. ಸಂವಿಧಾನ ಬದಲಿಸುವ ಮಾತುಗಳನ್ನು ಆಡುತ್ತಿದ್ದಾರೆ. ಯಾರೇ ಆಗಲಿ ಸಂವಿಧಾನಕ್ಕೆ ಕೈ ಹಾಕಿದರೆ ಸುಮ್ಮನೆ ಕೂರಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಸೂರ್ಯ–ಚಂದ್ರ ಇರುವವರೆಗೆ ಸಂವಿಧಾನ ಇರುತ್ತದೆ. ಇಡೀ ಜಗತ್ತಿನಲ್ಲಿಯೇ ಭಾರತದ ಸಂವಿಧಾನ ಶ್ರೇಷ್ಠವಾಗಿದೆ. ಅಂತಹ ಸಂವಿಧಾನ ಬದಲಿಸಿ ಮನುಸ್ಮೃತಿ ಹೇರುವ ಹುನ್ನಾರ ನಡೆಸಲಾಗುತ್ತಿದೆ. ಆದರೆ, ಅದರಲ್ಲಿ ಯಶಸ್ಸು ಸಿಗುವುದಿಲ್ಲ’ ಎಂದು ಹೇಳಿದರು.

ಮುಖಂಡ ಮಧುರಚೆನ್ನ ಶಾಸ್ತ್ರಿ ಮಾತನಾಡಿ, ‘ಅಂಬೇಡ್ಕರ್‌ ಕೊಟ್ಟಿರುವ ಸಂವಿಧಾನ ಇಡೀ ಜಗತ್ತಿನಲ್ಲಿಯೇ ಶ್ರೇಷ್ಠವಾದುದು. ಕಾಂಗ್ರೆಸ್‌ ಪಕ್ಷವೊಂದೆ ಸಂವಿಧಾನದ ಪ್ರಕಾರ ಕೆಲಸ ಮಾಡುತ್ತಿದೆ. ಸಮ ಸಮಾಜಕ್ಕಾಗಿ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.

ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಮುನ್ನಿ ಕಾಸೀಂ, ಜಿಲ್ಲಾ ಉಪಾಧ್ಯಕ್ಷೆ ರಜೀಯಾ ಬೇಗಂ, ಮುಖಂಡರಾದ ನಿಂಬಗಲ್‌ ರಾಮಕೃಷ್ಣ, ಟಿಂಕರ್‌ ರಫೀಕ್‌, ಪರಶುರಾಮಪ್ಪ, ಸಂದೀಪ್‌ ಸಿಂಗ್‌, ದಾದಾ ಪೀರ್‌, ಬಡಾವಲಿ, ಫಹೀಮ್‌ ಬಾಷಾ, ಮಹೇಶ್‌ ಕುಮಾರ್‌, ರಾಮಾಂಜಿನಿ, ವಿನಾಯಕ ಶೆಟ್ಟರ,  ವಿಜಯಕುಮಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !