ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಅಭ್ಯರ್ಥಿ ಎನ್‌.ಎಂ. ನಬಿ ಸಂದರ್ಶನ: ಗೆದ್ದರೆ ಜನತಾ ಮನೆಗಳನ್ನು ಕೊಡುವೆ

ಜೆ.ಡಿ.ಎಸ್‌. ಅಭ್ಯರ್ಥಿ ಎನ್‌.ಎಂ. ನಬಿ ಸಂದರ್ಶನದಲ್ಲಿ ಹೇಳಿಕೆ
Last Updated 1 ಡಿಸೆಂಬರ್ 2019, 8:54 IST
ಅಕ್ಷರ ಗಾತ್ರ

ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್‌.ಎಂ.ನಬಿ ಅವರಿಗೆ ನೆಲೆ ಸ್ಥಾಪಿಸುವ ಸವಾಲು. ಕಾರ್ಯಕರ್ತರ ಬಲದ ಮೇಲೆ ಅವರಿಗೆ ವಿಶ್ವಾಸ.

* ನಿಮಗೇಕೆ ಮತ ಕೊಡಬೇಕು?

ಹೋದಲೆಲ್ಲಾ ರೈತರು ಸಕ್ಕರೆ ಕಾರ್ಖಾನೆ ಬಗ್ಗೆ ಹೇಳುತ್ತಿದ್ದಾರೆ. ಅನೇಕರಿಗೆ ಜನತಾ ಮನೆಗಳನ್ನು ಕೊಟ್ಟಿಲ್ಲ. ಜಲಾಶಯ ಸಮೀಪವಿದ್ದರೂ ಅನೇಕ ಹಳ್ಳಿಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತಿದೆ. ಅದು ನೋಡಿ ನನಗೆ ಬೇಸರವಾಯಿತು. ಗೆದ್ದರೆ ಈ ಮೂರು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುವೆ.

* ಜೆಡಿಎಸ್‌ಗೆ ಕ್ಷೇತ್ರದಲ್ಲಿ ಭದ್ರ ನೆಲೆಯಿಲ್ಲ. ಅದು ಸವಾಲಲ್ಲವೇ?

ಕೂಡ್ಲಿಗಿಯಿಂದ ವಿಜಯನಗರ ಬಹಳ ದೂರವೇನಲ್ಲ. ಮತದಾರರೇ ನಮ್ಮ ನೆಲೆ. ಈ ಹಿಂದೆ ಜಿಲ್ಲೆಯಲ್ಲಿ ಬಿಜೆಪಿಯೇ ಇರಲಿಲ್ಲ. ಅಡ್ರೆಸ್ಸೆ ಇರಲಿಲ್ಲ. ಈಗ ಅದು ಬೆಳೆದಿಲ್ಲವೇ?

* ನೀವು ಹೊರಗಿನವರು ಎಂಬ ಅಪಪ್ರಚಾರಕ್ಕೆ ಏನು ಹೇಳುವಿರಿ?

ಆನಂದ್‌ ಸಿಂಗ್‌ ಅವರ ದೊಡ್ಡಪ್ಪ ಸತ್ಯನಾರಾಯಣ ಸಿಂಗ್‌ ಅವರಿಗೆ ಹಿಂದೆ ವಿಜಯನಗರದಿಂದ ಟಿಕೆಟ್‌ ಕೈತಪ್ಪಿದಾಗ ಕೂಡ್ಲಿಗಿಗೆ ಬಂದು ಚುನಾವಣೆಗೆ ನಿಂತಿದ್ದರು. ಆಗ ಆ ಮಾತು ಬಂದಿರಲಿಲ್ಲ. ಈಗೇಕೇ ಆ ಮಾತು. ಅವರಿಗೊಂದು ನನಗೊಂದಾ. ಅವರ ಕುಟುಂಬಕ್ಕೆ ಸಹಾಯ ಮಾಡಿದ್ದೇನೆ. ಅವರ ಕುಟುಂಬಕ್ಕೆ ನನ್ನ ಮೇಲೆ ಋಣ ಇದೆ. ಸಹಾಯ ಮಾಡಲು ಆಗದಿದ್ದರೆ ನನ್ನ ಬಗ್ಗೆ ಅಪಪ್ರಚಾರವಾದರೂ ಮಾಡಬಾರದು.

* ಅನರ್ಹ ಶಾಸಕರ ಬಗ್ಗೆ ಏನಂತೀರಿ?

ಮೂರು ಸಲ ಗೆದ್ದರೂ ಕ್ಷೇತ್ರಕ್ಕೆ ಆನಂದ್‌ ಸಿಂಗ್‌ ಕೊಡುಗೆ ಏನೂ ಇಲ್ಲ. ಜಿಲ್ಲೆ ಆಗಬೇಕು ಎಂದು ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದರು. ಅದಕ್ಕೂ ಮೊದಲು ಜಿಂದಾಲ್‌ಗೆ ಜಮೀನು ಕೊಡಬಾರದು ಅದಕ್ಕಾಗಿ ಕೊಟ್ಟೆ ಎಂದರು. ಈಗ ಅಭಿವೃದ್ಧಿಗಾಗಿ ರಾಜೀನಾಮೆ ಕೊಟ್ಟಿರುವೆ ಎನ್ನುತ್ತಿದ್ದಾರೆ. ಇವರನ್ನು ಜನ ನಂಬಬೇಕಾ? ಸಕ್ಕರೆ ಕಾರ್ಖಾನೆ ಬಂದ್‌ ಮಾಡಿರುವುದೇ ಅಭಿವೃದ್ಧಿನಾ? ಕ್ಷೇತ್ರದಲ್ಲಿ ಒಂದು ರಸ್ತೆಯೂ ಸರಿಯಿಲ್ಲ. ಎಲ್ಲಾ ಕಡೆ ಟ್ಯಾಂಕರ್‌ನಲ್ಲಿ ನೀರು ಕೊಡುತ್ತಿದ್ದಾರೆ. ಇದು ನಾಚಿಕೆಗೇಡಲ್ಲವೇ?

* ಅಲ್ಪಸಂಖ್ಯಾತರ ಮತ ವಿಭಜನೆಗೆ ನಬಿ ಅವರು ಸ್ಪರ್ಧಿಸಿದ್ದಾರೆ ಎಂಬ ಆರೋಪವಿದೆಯಲ್ಲ?

ಅದು ಅಪಪ್ರಚಾರವಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT