ಮಹಿಳೆಯರ ರಕ್ಷಣೆಗೆ ಆದ್ಯತೆ: ಶಾಸಕ ಜಿ.ಸೋಮಶೇಖರ್ ರೆಡ್ಡಿ ಭರವಸೆ

7
ಮಿಸೆಸ್ ಕ್ರಾಫ್ಟನ್ಸ್ ಮಹಿಳಾ ಮಂಡಳಿ 89 ನೇ ವಾರ್ಷಿಕೋತ್ಸವ

ಮಹಿಳೆಯರ ರಕ್ಷಣೆಗೆ ಆದ್ಯತೆ: ಶಾಸಕ ಜಿ.ಸೋಮಶೇಖರ್ ರೆಡ್ಡಿ ಭರವಸೆ

Published:
Updated:

ಬಳ್ಳಾರಿ: ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಿಸೆಸ್ ಕ್ರಾಫ್ಟನ್ಸ್ ಮಹಿಳಾ ಮಂಡಳಿಯ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಭರವಸೆ ನೀಡಿದರು.

ಇಲ್ಲಿನ ಮಿಸೆಸ್ ಕ್ರಾಫ್ಟನ್ಸ್ ಮಹಿಳಾ ಮಂಡಳಿಯ ಅಲ್ಲಂ ಸುಮಂಗಳಮ್ಮ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 89 ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸ್ತ್ರೀಯರಿಗೆ ರಕ್ಷಣೆ ಇಲ್ಲದಂತಾಗಿದೆ. 89 ವರ್ಷಗಳಿಂದ ಮಹಿಳೆಯರ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸಮಾಜ ಸೇವೆಯಲ್ಲಿ ತೊಡಗಿರುವ ಮಂಡಳಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ.ಅರುಣಾ ಕಾಮಿನೇನಿ ಮಾತನಾಡಿ, ಬಾಲಕಿಯರ ಮೇಲೆ ನಿರಂತರವಾಗಿ ಅತ್ಯಾಚಾರಗಳು ನಡೆಯುತ್ತಲೇ ಇವೆ. ಇಂದಿನ ಸಮಾಜದಲ್ಲಿ ಮಹಿಳೆ ಒಂಟಿಯಾಗಿ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಮಂಡಳಿ ಅಧ್ಯಕ್ಷೆ ಮಾಯಾ ಪಿ.ರಾವ್ ಮಾತನಾಡಿ, 1927ರಲ್ಲಿ ಕ್ರಾಫ್ಟನ್ ಎಂಬ ಜಿಲ್ಲಾಧಿಕಾರಿ ಪತ್ನಿಯ ಹೆಸರಿನಲ್ಲಿ ಮಂಡಳಿ ಆರಂಭಿಸಿದ್ದರು. ಡಾ.ದೊರೆಸ್ವಾಮಿ, ಸುಮಂಗಳಮ್ಮ, ಶಾರದಾ ಮಳೆಬೆನ್ನೂರ್ ಅಂತಹ ಧೀಮಂತ ಮಹಿಳೆಯರು ಈ ಮಂಡಳಿಗೆ ಸೇವೆ ಸಲ್ಲಿಸಿದ್ದಾರೆ ಎಂದರು.

ಮಂಡಳಿಯ ಕಾರ್ಯದರ್ಶಿ ಪಿ.ರಮಾದೇವಿ, ಸದಸ್ಯೆ ವಿಜಯಲಕ್ಷ್ಮಿ, ಹಿರಿಯ ವಕೀಲ ಆರ್.ಪಾಂಡು, ಉದ್ಯಮಿ ರಾಧಾಕೃಷ್ಣ ಪೋಲಾ, ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್ ಇದ್ದರು,

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !